ಪಟ್ಟಿಗೆ ಹಿಂತಿರುಗಿ

ಕಗ್ಗ 373 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಮನೆಯ ತೊರೆದೋಡಲೇಂ? ವನಗುಹೆಯ ಸಾರಲೇಂ? । ತನುವನುಗ್ರವ್ರತಗಳಿಂದೆ ದಂಡಿಸಲೇಂ? ॥ ಬಿನದಗಳನರಸಿ ನೀನೂರೂರೊಳಲೆದೊಡೇಂ? । ಮನವ ತೊರೆದಿರಲಹುದೆ - ಮಂಕುತಿಮ್ಮ ॥ ೩೭೩ ॥

maneya toredu ODalEm? vanaguheya sAralEm? । tanuvanu ugravratagaLinde danDisalEm? ॥ binadagaLAnu arasi nInu UrU UroLu aledoDe Em? । manava toredu iralu ahude - Mankutimma ॥ 373 ॥

ಕನ್ನಡದಲ್ಲಿ ಅರ್ಥ

‘ಮನೆಯ ತೊರೆದು ಹೋದರೇನು ಅಥವಾ ತಪಸ್ಸಿಗೆಂದು ಕಾಡಿನ ಗುಹೆಗಳಲ್ಲಿ ಸೇರಿದರೇನು ಅಥವಾ ಹಠಯೋಗ ಮುಂತಾದ ಕಠಿಣ ವ್ರತಗಳಿಂದ ದೇಹವನ್ನು ದಂಡಿಸಿದರೇನು ಅಥವಾ ಸುಖವನ್ನು ಹುಡುಕುತ್ತಾ ಒಂದು ಊರಿಂದ ಬೇರೆ ಬೇರೆ ಊರಿಗೆ ಹೋದರೇನು, ನಮ್ಮ ಮನಸ್ಸನ್ನು ತೊರೆಯಲಾಗುವುದೇ?’ ಎಂದು ನಮ್ಮ ಮತ್ತು ಮನಸ್ಸಿನ ಅವಿನಾಭಾವ ಸಂಬಂಧವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"Will abandoning one's home help? Will retreating to forest help? Will subjecting the body to strict austerity help? Will wandering from village to village in search of happiness help? Wherever you go, whatever you do - your mind is following you will all its baggage and will not let you in peace. Is there a way one can live by leaving his mind behind?" - Mankutimma

ವಿಷಯಗಳು

SocietyPeace

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.