ಪಟ್ಟಿಗೆ ಹಿಂತಿರುಗಿ

ಕಗ್ಗ 262 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಒಂದು ಕಣ್ಣಳುವಂದು ಮತ್ತೊಂದ ತಳ್ಕೈಸಿ । ಅಂದ ಚೆಂದಗಳ ಜನವರಸುವುದು ಬಾಳೊಳ್ ॥ ಬಂಧುಮೋಹವೊ ಯಶವೊ ವೈರವೋ ವೈಭವವೊ । ಬಂಧಿಪುದು ಜಗಕವರ - ಮಂಕುತಿಮ್ಮ ॥ ೨೬೨ ॥

ondu kaNNu aLuvandu mattond taLkaisi । anda chendagaLa janavu arasuvudu bALoL ॥ bandhu mOhavo yashavo vairavO vaibhavavo । bandhipudu jagakavara - Mankutimma ॥ 262 ॥

ಕನ್ನಡದಲ್ಲಿ ಅರ್ಥ

ಒಬ್ಬರು ಅಳುತ್ತಿದ್ದರೆ ಮತ್ತೊಬ್ಬರು ಅವರನ್ನು ತಬ್ಬಿಕೊಂಡು ಸಂತೈಸಿ ಸಾಂತ್ವನಗೊಳಿಸುತ್ತಾರೆ. ಇದು ಒಂದು ರೀತಿಯ ಬಂಧ. ಹೀಗೆಯೇ ಜನರು ಬಾಳಿನಲ್ಲಿ ಅಂದ ಚೆಂದಗಳ ಅರಸುತ್ತಾರೆ. ಮೋಹ, ಯಶಸ್ಸು, ಪರಾಭವ, ದ್ವೇಷ ಮುಂತಾದ ಭಾವನೆಗಳಿಂದ ಒಬ್ಬರಿಗೊಬ್ಬರು ಬಂಧಿತರಾಗಿ ತನ್ಮೂಲಕ ಈ ಜಗತ್ತಿಗೆ ಅಂಟಿಕೊಂಡಿರುತ್ತಾರೆ, ಈ ಜಗದ ಮನುಜರು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಅರ್ಥ ಮತ್ತು ವ್ಯಾಖ್ಯಾನ

"When one eye sheds tears, people try to make themselves happy by showing beautiful things tot he other eye. This is how world works - in constant pursuit of happiness. People get trapped in this world permanently due to love for relatives, seeking fame, wanting revenge or longing for magnanimity. " - Mankutimma

ವಿಷಯಗಳು

LifeSocietyLoveDuty

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.