ಪಟ್ಟಿಗೆ ಹಿಂತಿರುಗಿ

ಕಗ್ಗ 261 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಆಟವೋ ಮಾಟವೋ ಕಾಟವೋ ಲೋಕವಿದು! । ಊಟ ಉಪಚಾರಗಳ ಬೇಡವೆನ್ನದಿರು ॥ ಪಾಟವವು ಮೈಗಿರಲಿ, ನೋಟ ತತ್ತ್ವದೊಳಿರಲಿ । ಪಾಠಿಸು ಸಮನ್ವಯವ - ಮಂಕುತಿಮ್ಮ ॥ ೨೬೧ ॥

ATavO mATavO kATavO lOkavidu! । UTa upachAragaLa bEDavennadiru ॥ pATavavu maigirali, nOTa tattva । pAThisu samanvayava - Mankutimma ॥ 261 ॥

ಕನ್ನಡದಲ್ಲಿ ಅರ್ಥ

ಈ ಜಗತ್ತಿನಲ್ಲಿ ನೀನು ಬಂದಮೇಲೆ ಜೀವನವನ್ನು ಒಂದು ಆಟವಾಗಿಯೋ, ಶ್ರಮವಾಗಿಯೋ, ಹಿಂಸೆಯಾಗಿಯೋ ಅನುಭವಿಸಲೇ ಬೇಕು. ಬೇರೆ ದಾರಿಯಿಲ್ಲ, ಇದೇ ಪ್ರಪಂಚ. ಇದು ನನಗೆ ಇಷ್ಟವಿಲ್ಲ ಎಂದು ನೀನು ನಿರಾಹಾರನಾಗಿ ದೇಹವನ್ನು ದಂಡಿಸಬೇಡ. ದೇಹ ದೃಢವಾಗಿರಲಿ. ಮನಸ್ಸು ಬುದ್ಧಿಗಳು ಪರಮಾತ್ಮನನ್ನು ಚಿಂತಿಸುತ್ತ ಇಹ ಮತ್ತ ಪರಗಳೆರಡರ ನಡುವೆ ಒಂದು ಸಮನ್ವಯವನ್ನು ಸಾಧಿಸು ಎಂದು ಒಂದು ಆದೇಶ ನೀಡುತ್ತಾರೆ ಮಾನ್ಯ ಗುಂಡಪ್ಪನವರು.

ಅರ್ಥ ಮತ್ತು ವ್ಯಾಖ್ಯಾನ

"This world could be a game, an illusion or just a pain. But we have to get through this. So, do not say no to food and nourishments. Let these be a lesson to your body. But let us keep our eyes (mind) on the philosophy. The goal of hte mind should be to attain a balance." - Mankutimma

ವಿಷಯಗಳು

LifeSuffering

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.