ಪಟ್ಟಿಗೆ ಹಿಂತಿರುಗಿ

ಕಗ್ಗ 150 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ದೊರೆ ಮೂವರಿರುವಲ್ಲಿ ಸರಿಯಿಹುದೆ ಸೋಜಿಗವು । ಕೊರತೆ ಹೆಚ್ಚಿಕೆಗಳಿರಲಚ್ಚರಿಯದೇನು? ॥ ಬರಲಿ ಬರುವುದು; ಸರಿವುದೆಲ್ಲ ಸರಿಯಲಿ; ನಿನಗೆ । ಪರಿವೆಯೇನಿಲ್ಲೆಲವೊ - ಮಂಕುತಿಮ್ಮ ॥ ೧೫೦ ॥

dore mUvariruvalli sariyihude sOjigavu । korate hecchikegaLu iralacchariyadEnu? ॥ barali baruvudu; sarividella sariyali; ninage । pariveyu enilla elavo - Mankutimma ॥ 150 ॥

ಕನ್ನಡದಲ್ಲಿ ಅರ್ಥ

ನಮ್ಮನ್ನಾಳುವ ದೊರಗಳು ಮೂವರು ಇರುವಲ್ಲಿ ಎಲ್ಲವೂ ಸರಿಯಿದ್ದರೆ ಅದು ಆಶ್ಚರ್ಯವೇ ಸರಿ. ಹೆಚ್ಚು ಕಡಿಮೆಗಳು, ಕೊರತೆ, ಹೆಚ್ಚಳಿಕೆಗಳು ಇದ್ದರೆ ಅಚ್ಚರಿಯಿಲ್ಲ. ಬರುವುದು ಬರಲಿ ನಡೆಯುವುದೆಲ್ಲ ನಡೆಯಲಿ ಅದನ್ನು ಕುರಿತು ನೀವು ಹೆಚ್ಚಾಗಿ ಚಿಂತಿಸುವೆ ಏಕೋ ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ. 

ಅರ್ಥ ಮತ್ತು ವ್ಯಾಖ್ಯಾನ

"With three masters for our life, it is interesting that at least some things fine in this world. Is there any surprise if there are some shortcomings or unexpected windfalls? Let what has to come come. Let all that has to move move. Why should you worry?" - Mankutimma [Translator's note: http://subhashitani.wordpress.com/2011/04/29/]

ವಿಷಯಗಳು

LifeSufferingNaturePeace

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.