ಪಟ್ಟಿಗೆ ಹಿಂತಿರುಗಿ

ಕಗ್ಗ 149 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಅರಸನೊಬ್ಬನಲ್ಲ; ಮೂವರು ಬಾಳನಾಳುವರು । ನರ ಕರುಮ ದೈವಗಳು; ತೊಡಕದಕೆ ಸಾಜ ॥ ಗುರಿಯಿಡದ, ಮೊದಲು ಕೊನೆಯಿರದ, ದರಬಾರಿನಲಿ । ಸರಿಯೇನೊ ತಪ್ಪೇನೊ? - ಮಂಕುತಿಮ್ಮ ॥ ೧೪೯ ॥

arasanobbanalla; mUvaru bALanu ALuvaru । nara karuma daivagaLu; toDakadake sAja ॥ guriyiDada, modalu koneyirada, darabArinali । sariyEno tappEno? - Mankutimma ॥ 149 ॥

ಕನ್ನಡದಲ್ಲಿ ಅರ್ಥ

ನಮ್ಮ ಬಾಳಿಗೆ ಅರಸ ಅಥವಾ ಒಡೆಯ ಒಬ್ಬನಲ್ಲ. ಮೂರು ಜನರಿದ್ದಾರೆ. ನಾವು, ನಮ್ಮ ಪೂರ್ವ ಕರ್ಮ ಮತ್ತು ದೈವ. ಹೀಗೆ ಒಂದು ಕಾರ್ಯಕ್ಕೆ ಮೂರು ಅರಸರಿದ್ದಾಗ, ತೊಡಕುಂಟಾಗುವುದು ಸಹಜ. ಒಂದು ಆದಿ ಮತ್ತು ಒಂದು ಅಂತ್ಯವಿರದ ಮತ್ತು ಯಾವುದೇ ನಿರ್ಧಾರಿತ ಗುರಿಯಿರದ ಈ ಬಾಳಿನಲ್ಲಿ ನಡೆಯುವುದರಲ್ಲಿ ಸರಿಯೇನೋ ತಪ್ಪೇನೋ ಎಂದು ಒಂದು ಮಹತ್ತಾದ ವಿಷಯವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. 

ಅರ್ಥ ಮತ್ತು ವ್ಯಾಖ್ಯಾನ

"There no 'one' master to our lives. There are three. We are one of them. Results of our actions - present and past is another. God is the third master of our lives. With these three masters there seems to be no goal, no start or end in this court. There is no definite rule to judge our actions by - good or bad." - Mankutimma

ವಿಷಯಗಳು

DevotionDeathMorality

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.