ಪಟ್ಟಿಗೆ ಹಿಂತಿರುಗಿ

ಕಗ್ಗ 137 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ನಾನೆನುವವನೆ ವಿಶ್ವಚಕ್ರನಾಭಿಯವಂಗೆ । ಕಾಣಬಹ ದಿಗ್ವಲಯ ಚಕ್ರನೇಮಿಪಥ ॥ ಅನಂತ್ಯವೀ ಜಗಚ್ಚಕ್ರನಾಭಿಕ್ರಮತೆ । ತಾನೊಂದೆ ಸತ್ತ್ವವದು - ಮಂಕುತಿಮ್ಮ ॥ ೧೩೭ ॥

nAnenuvavane vishva chakra nAbhiyu avange । kANabaha dik valaya chakranemIpatha ॥ anantyavI jagat chakrana abhikramate । tAnode sattvavadu - Mankutimma ॥ 137 ॥

ಕನ್ನಡದಲ್ಲಿ ಅರ್ಥ

ನಾನು ಎಂದು ಯಾರಾದರೂ ಅಂದರೆ ಅವನು ಅವನ ಮಟ್ಟಿಗೆ ಅವನ ಒಂದು ಜಗಚ್ಚಕ್ರಕ್ಕೆ ನಾಭಿಯಂತಾಗುತ್ತಾನೆ. ಅವನು ನೋಡುತ್ತಿರುವುದು ಜಗತ್ತಿನ ಚಕ್ರದ ಅನಂತ ಉರುಳಾಟ. ಅದೊಂದೇ ಜೀವನದ ತಿರುಳು ಸತ್ವ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"A person who believes 'each man is the center of his world' will see himself at the center of the world wheel. Any direction he looks, he sees path taken by that wheel. The revolutions of this wheel is never-ending. This is the only ultimate truth." - Mankutimma

ವಿಷಯಗಳು

WisdomLifeDeathSelf

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.