Back to List

Kagga 94 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕೇಳಿಯುಂ ಮಾಯೆಯದು; ನೃತ್ಯಗತಿ ಬರಿತೋರ್ಕೆ । ಮೂಲಮಂ ಕಂಡಂಗೆ ಸಂಭ್ರಾಂತಿಯೇನು? ॥ ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ । ಲೀಲಾಪ್ರಿಯಂ ಬ್ರಹ್ಮ - ಮಂಕುತಿಮ್ಮ ॥ ೯೪ ॥

kELiyum mAyeyadul nRutyagati bari tOrke । mUlavam kandange sambhrantiyenu? ॥ ALadali nirlipta mEle niyatiklupta । lIlApriyam brahma - Mankutimma ॥ 94 ॥

Meaning in Kannada

ಆ ಪರಮಾತ್ಮನ ಆ ಜಗನ್ನಾಟಕ ಕೇವಲ ಮಾಯೆಯಿಂದ ಕೂಡಿದೆ. ಅದರ ನೃತ್ಯ ಬರೀ ತೋರಿಕೆಯಷ್ಟೇ!. ಯಾರಿಗಾದರೂ ಪರಮ ಚೇತನದ ಮೂಲ ರೂಪದ ಅರಿವಾದರೆ ದ್ವಂದ್ವಗಳಾಗಲೀ ಸಂದೇಹಗಲಾಗಲೀ ಇರುವುದಿಲ್ಲ. ಏಕೆಂದರೆ, ತನ್ನ ನಿಜರೂಪದಲ್ಲಿ ಆ ಪರಮಾತ್ಮ ತನ್ನ ಸೃಷ್ಟಿಯಿಂದ ನಿರ್ಲಿಪ್ತ, ಆದರೆ ಈ ಜಗನ್ನಾಟಕದ ಚಿತ್ರ ವಿಚಿತ್ರ ನಾಟ್ಯ ಮತ್ತು ನಡಿಗೆಯನ್ನು ತನ್ನ ವಿನೋದಕ್ಕಾಗಿ ಲೀಲೆಯಂತೆ ನಡೆಸುತ್ತಿದ್ದಾನೆ ಎಂದು ಈ ಕಗ್ಗದಲ್ಲಿ ಪಾನ್ಯ ಗುಂಡಪ್ಪನವರು ವ್ಯಾಖ್ಯಾನಮಾಡಿದ್ದಾರೆ. 

Meaning & Interpretation

Thinking may also be an illusion (of free will). The well choreographed world order is only a show. If a person has realised the root of it all - he will look through this illusion. On the surface it may seem as though the creator also is bound by rules and subject to some form of attachments; underneath he is totally detached and is truly free. The creator is likes playing with his creation. - Mankutimma

Themes

LifeNature

Video Section

Video Coming Soon

Detailed video explanations by scholars and experts will be available soon.