Mankutimmana Kagga by D.V. Gundappa
ಕಡೆಗಾಲವನು ತಾನೆ ಮುನ್ನರಿತು ಕಾಡಾನೆ- । ಯಡವಿಯೊಳದೊಂದು ದೂರದ ಗವಿಯನೈದಿ ॥ ಬಿಡುವುದಾಯೆಡೆ ಮೌನದಿಂದಸುವನೆನ್ನುವರು । ಕಡೆಯ ಸಾರಂತು ನೀಂ- ಮಂಕುತಿಮ್ಮ ॥ ೯೨೮ ॥
kaDegAlavanu tAne munna aritu kADAneyu । aDaviyoL adondu dUrada gaviyaniadi ॥ biDuvudAyeDe maunadinda asuvan ennuvaru । kaDeya sAru antu nIm - Mankutimma ॥ 928 ॥
‘ ಕಾಡಾನೆ ‘ ತನ್ನ ಮರಣ ಸನ್ನಿಹಿತವಾಯಿತೆಂದು ಮೊದಲೇ ಅರಿತು, ಕಾಡಿನಲ್ಲಿನ ಒಂದು ಗುಹೆಯೊಳಕ್ಕೆ ಸೇರಿ, ಮೌನವಾಗಿ ತನ್ನ ಉಸಿರನ್ನು ಬಿಡುವುದು ಎಂದು ಹೇಳುತ್ತಾರೆ. ನೀನೂ ಸಹ, ನಿನ್ನ ಅಂತ್ಯಕಾಲ ಹತ್ತಿರವಾದಾಗ, ಹಾಗೆ ದೂರ ಸರಿದು, ಮೌನವಾಗಿ ಕೊನೆಯುಸಿರನ್ನು ಬಿಟ್ಟು ಈ ಲೋಕದಿಂದ ಸರಿದು ಹೋಗು ಎಂದು, ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
They say a wild elephant knows its end time in advance. When it is time, it enters a far away cave in the forest and silently lets go of its life there. You should announce your end like that- by retreating from the world. - Mankutimma
Video Coming Soon
Detailed video explanations by scholars and experts will be available soon.