Back to List

Kagga 76 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ । ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲಸಿ ॥ ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ । ವಿಹರಿಪನು ನಿರ್ಲಿಪ್ತ! - ಮಂಕುತಿಮ್ಮ ॥ ೭೬ ॥

bahuvAgalu eLasi tAnobbanTi bomma nija । mahimeyiM sRujisi vishvavanu illi nelasi ॥ vahisi jIvateya mAyeya sarasavirasadali । viharipanu nirlipta! - Mankutimma ॥ 76 ॥

Meaning in Kannada

ಆ ಮಹಾ ಶಕ್ತಿ ಒಂದೇ ಇತ್ತು. ಅದು ತಾನೇ ಹಲವಾಗಿ ಪ್ರಕಟಗೊಳ್ಳಬೇಕೆಂದು, ತನ್ನ ಸಂಕಲ್ಪದಿಂದ , ತನ್ನದೇ ಆದ ಪರಮ ಶಕ್ತಿಯಿಂದ ಈ ವಿಶ್ವವನ್ನು ಸೃಷ್ಟಿಸಿ, ತನ್ನ ಶಕ್ತಿಯನ್ನು ಪ್ರತಿಯೊಂದರಲ್ಲೂ ಇರಿಸಿ ತನ್ನ ಇರವನ್ನು ನಿಗೂಢವಾಗಿರಿಸಿಕೊಂಡು, ತಾನು ಮಾತ್ರ ನಿರ್ಲಿಪತೆತೆಯಿಂದ ಈ ಜಗವನ್ನು ನಡೆಸಿಕೊಂಡು ಹೋಗುತ್ತಿದ್ದಾನೆ ಎನ್ನುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು. 

Meaning & Interpretation

The creator felt he was alone. So, he thought of becoming 'many' himself. He used his greatness to create and place this universe here. In that he created life. Once this illusion of 'many' was created, he wanders in it unattached to the multitude of emotions it has. - Mankutimma

Themes

LifeNatureSelfLove

Video Section

Video Coming Soon

Detailed video explanations by scholars and experts will be available soon.