Back to List

Kagga 727 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ? । ಓಲೆಗಳನವರವರಿಗೈದಿಸಿರೆ ಸಾಕು ॥ ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ! । ಕಾಲೋಟವವನೂಟ - ಮಂಕುತಿಮ್ಮ ॥ ೭೨೭ ॥

OlegAranigEke bareda suddhiya chinte? । OlegaLanu avaravarigaidisidare sAku ॥ sAlagaLo, shUlagaLo, nOvugaLo, naguvugaLo! । kAlOTavu avanUTa - Mankutimma ॥ 727 ॥

Meaning in Kannada

ಪತ್ರ ಹಂಚುವವನಿಗೆ ಪತ್ರದೊಳಗಿನ ಸುದ್ಧಿಯ ಚಿಂತೆ ಏಕೆ? ಬೇರೆ ಬೇರೆಯವರಿಗೆ ಸೇರಬೇಕಾದ ಪತ್ರಗಳು ಅವರವರಿಗೆ ಸೇರಿಸಿದರೆ ಸಾಕು. ಆ ಪತ್ರಗಳಲ್ಲಿ, ಸಾಲದ ವಿಷಯವೋ, ನೋವಿನ ವಿಚಾರವೋ ಅಥವಾ ಸಂತೋಷದ ಸಮಾಚಾರವೋ ಏನಾದರಾಗಲಿ ಅದು ಕೇವಲ ಯಾರಿಗೆ ಸೇರಬೇಕೋ ಅವರಿಗೆ ಸೇರಿದರೆ ಸಾಕು. ಅದನ್ನು ತಲುಪಿಸುವವನಿಗೆ, ಆ ಪತ್ರಗಳನ್ನು ತಲುಪಿಸಿ ಕಾಲದೂಡುವುದೇ ಧರ್ಮ ಎಂದು, ಬದುಕಿನಲ್ಲಿ ಒಂದು ನಿರ್ಲಿಪ್ತ ಭಾವವನ್ನು ಬೆಳೆಸಿಕೊಳ್ಳುವ ಬಗೆಯನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

Why is the messenger bothered about the content of the message? His job is done if he delivers them to the right people. The message could be about debt, death, pain or happiness. He is not bothered. He is running around to earn his food. - Mankutimma

Themes

DeathMoralitySufferingSocietyWarPeace

Video Section

Video Coming Soon

Detailed video explanations by scholars and experts will be available soon.