Mankutimmana Kagga by D.V. Gundappa
ಪ್ರತ್ಯೇಕ ಸುಖವ, ನೀಂ ಪ್ರತ್ಯೇಕ ಸಂಪದವ- । ನತ್ಯಾಶೆಯಿಂದರಸಿ ಮಿಕ್ಕೆಲ್ಲ ಜಗವ- ॥ ನೊತ್ತಟ್ಟಿಗಿಡುವೆನೆನೆ, ನಷ್ಟವಾರಿಗೊ ಮರುಳೆ? । ಬತ್ತುವುದು ನಿನ್ನಾತ್ಮ - ಮಂಕುತಿಮ್ಮ ॥ ೬೧೯ ॥
pratyeka sukhava, nIm pratyeka sampadavanu । atyAsheyinda arasi mikkella jagavanu ॥ ottoTTige iDuvenu ene, naShTavArigo marule? । battuvudu ninnAtma - Mankutimma ॥ 619 ॥
"ನನ್ನ ಸುಖ ನನಗೆ ಮುಖ್ಯ ನನ್ನ ಆಸ್ತಿ ಸಂಪತ್ತು ನನಗೆ ಮುಖ್ಯ, ಈ ಜಗತ್ತಿನಿಂದ ನನಗೇನಾಗಬೇಕಿದೆ, ಎಂದು ಅತಿ ಆಸೆ ಪಟ್ಟು ಈ ಜಗತ್ತಿನಿಂದ ದೂರವಿದ್ದರೆ, ನಷ್ಟವು ಯಾರಿಗೋ, ಹುಚ್ಚ?" ಎಂದು ಕೇಳುತ್ತಾ, ಹಾಗೆ ಮಾಡಿದರೆ ನಿನ್ನ ಆತ್ಮ ಬತ್ತುವುದು, ಸೊರಗುವುದು ಎಂದು ಜಗದಾಭಿಮುಖ್ಯವಾಗಿ ಇಲ್ಲದೆ ಸ್ವಾರ್ಥ ಸಾಧಿಸುವ ಜನರಿಗೆ ಒಂದು ಕಿವಿಮಾತನ್ನು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
If you want all your happiness and all your prosperity to yourself (and don't share) and push the rest of the world away, then who is at loss? You are a fool to think it is in your interest to do so. It is your soul that is drying up." - Mankutimma
Video Coming Soon
Detailed video explanations by scholars and experts will be available soon.