Mankutimmana Kagga by D.V. Gundappa
ಸೆಳೆಯುತಿರ್ಪುವದೊಂದು ಹೊರಬೆಡಗಿನೆಳೆಗಳೆ । ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು ॥ ಎಳೆದಾಟವೇಂ ಋಣಾಕರ್ಷಣೆಯೊ? ಸೃಷ್ಟಿವಿಧಿ । ಯೊಳತಂತ್ರವೊ? ನೋಡು - ಮಂಕುತಿಮ್ಮ ॥ ೫೧ ॥
seLeyutirpuvu adondu horabeDagina eLegaLu en । oLagina asuvellavanu kaTTinim bigidu ॥ eLedATavEm? RuNAkarShaNeyo? sRuShTividhiya । oLatantravO? nODu - Mankutimma ॥ 51 ॥
ಹೊರಜಗತ್ತಿನ ಆಕರ್ಷಣೆಗಳು ನನ್ನೊಳಗಿನ ಚೇತನವನ್ನು ಯಾವುದೋ ಒಂದು ಶಕ್ತಿ ಬಿಗಿದು ಕಟ್ಟಿ ಹಾಕಿ ಎಳೆಯುತ್ತಿದೆ. ಇದು ಏನು ಎಲೆದಾಟವೋ ಅಥವಾ ಪೂರ್ವ ಕರ್ಮಗಳ ಸೆಳೆತವೋ? ಅಥವಾ ಈ ಜಗತ್ತಿನ ಸೃಷ್ಟಿಯ ನಿಯಮದ ಒಳತಂತ್ರವೋ ಎನ್ನುವುದನ್ನು ನೀನೆ ಪರಕಿಸಿ ನೋಡು ಎನ್ನುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.
I feel that some external force has a firm grip on all my inner essence (life, mind) and is dragging it towards these wonders of this external sensory world. Is this attraction a matter of fate? Or is it some law of creation that we are not able to decipher? Think. - Mankutimma
Video Coming Soon
Detailed video explanations by scholars and experts will be available soon.