Back to List

Kagga 317 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪುಣ್ಯಪಾಪದ ಮಿಶ್ರ ನರಜಂತುವವನ ನೆಲೆ । ಮಣ್ಣು ಕರುಳುಗಳೆಸಕವವನ ಮೈದೊಡವು ॥ ಬಣ್ಣ ಬಣ್ಣದ ವಸ್ತ್ರ; ಬಿಳ್ಪೊಡನೆ ಕಪ್ಪಿಹುದು । ಕಣ್ಣ ದುರುಗುಟಿಸದಿರು - ಮಂಕುತಿಮ್ಮ ॥ ೩೧೭ ॥

puNyapApada mishra narajantuvu avana nele । maNNu karuLugaLu esakavu avana maidoDavu ॥ baNNa baNNAda vastra; biLpoDane kappihudu । kaNNA duruguTisade iru - Mankutimma ॥ 317 ॥

Meaning in Kannada

ಪುಣ್ಯ ಮತ್ತು ಪಾಪಗಳ ಮಿಶ್ರಣದಿಂದಾದವನೇ ನಮ್ಮ ಮಾನವ. ಈ ಜಗತ್ತಿನ ವಸ್ತುಗಳು ಮತ್ತು ಅದರೊಂದಿಗೆ ಅವನ ಸಂಬಂಧಗಳಲ್ಲೇ ಸಂತೋಷಪಡುವುದು ಅವನ ಸ್ವಭಾವ. ಹೇಗೆ ಅವನು ಹಾಕಿಕೊಳ್ಳುವ ಬಣ್ಣಬಣ್ಣದ ವಸ್ತ್ರಗಳಲ್ಲಿ ಬಿಳುಪು ಮತ್ತು ಕಪ್ಪು ಬಣ್ಣ ಎರಡೂ ಕೂಡಿ ಇದೆಯೋ, ಹಾಗೆಯೇ ಅವನ ಸ್ವಭಾವದಲ್ಲೂ ಗುಣ ಮತ್ತು ದೋಷಗಳೆರಡೂ ಇವೆ. ಅದನ್ನು ನೀನು ಕೋಪದಿಂದ ವಿಮರ್ಶೆಮಾಡಬೇಡ ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"Man's efforts attract both sins and good karma. His actions are driven by his attachment towards his past (homeland) and future (his children). He wears colorful clothes (does lot of antics). There is some dark along with white. (some good, some sins). Every body is like that. You dont squint your eyes when you see some one with a mix of good and bad qualities." - Mankutimma

Themes

MoralityFateWar

Video Section

Video Coming Soon

Detailed video explanations by scholars and experts will be available soon.