Back to List

Kagga 229 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತೊರೆಯ ತೆರೆಸಾಲ್ಗಳೇಳುತ ಬೀಳುತಿರುವಂತೆ । ಪರಿಯುತಿರ್ಪುದು ಪುರುಷಚೈತನ್ಯಲಹರಿ ॥ ಅರಿಯದದು ನಿಲುಗಡೆಯ, ತೊರೆಯದದು ಚಲಗತಿಯ । ಪರಬೊಮ್ಮನುಯ್ಯಲದು - ಮಂಕುತಿಮ್ಮ ॥ ೨೨೯ ॥

toreya tere sAlgaLu ELuta bILitiruvante । pariyutirpudu puruSha chaitanya lahari ॥ ariyadadu nilugaDeya, toreyadadu chalagati । parabommana uyyala adu - Mankutimma ॥ 229 ॥

Meaning in Kannada

ಪುರುಷ ಚೈತನ್ಯ, ನದಿಯ ತೆರೆಯಂತೆ ಏಳುತ್ತಾ ಬೀಳುತ್ತಾ ಹರಿಯುತ್ತಿದೆ. ಅದಕ್ಕೆ ತನ್ನ ನಿಲುವೆಲ್ಲಿ ಎಂದು ಗೊತ್ತಿಲ್ಲ. ಅದು ತನ್ನ ಚಲನೆಯ ಗತಿಯೂ ಗೊತ್ತಿಲ್ಲ. ಈ ಜಗತ್ತಿನಲ್ಲಿ ಹರಿಯುವ ಪರಮ ಚೈತನ್ಯದ ಚಲನೆ ಆ ಪರಮಾತ್ಮನ ಉಯ್ಯಾಲೆಯಂತಿದೆ ಎಂದು ಬಹಳ ಗಹನ ತತ್ವದ ಪ್ರತಿಪಾದನೆಯನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ .

Meaning & Interpretation

"The waves in a stream always ebb and fall for ever. So does the energy that drives man's progress. It does not knows to stop. It will not give up the dynamic nature. It's motion is like the perfect pendullum of God." - Mankutimma

Themes

DevotionDeathNature

Video Section

Video Coming Soon

Detailed video explanations by scholars and experts will be available soon.