Mankutimmana Kagga by D.V. Gundappa
ತಂಗಳುಣಿಸಾದೊಡಂ ಸಾಕೆನುವನುಪವಾಸಿ । ಸಿಂಗಾರ ಸಂಗಾತಿ ಬೇಕುಂಡವನಿಗೆ ॥ ಬಂಗಾರ ಪದವಿ ಪ್ರತಿಷ್ಠೆ ಬೇಕಾಬಳಿಕ । ಹಿಂಗದಾಯೆದೆಚಿಲುಮೆ - ಮಂಕುತಿಮ್ಮ ॥ ೨೧೦ ॥
tangaLu uNisAdoDam sAku enuvanu upavAsi । singAra sangAti bEku unDavanige ॥ bangAra padavi pratiShThe bEku AbaLika । hingadu A ede chilume - Mankutimma ॥ 210 ॥
ಬಹಳ ಹಸಿವಿನಿಂದಿರುವವನಿಗೆ ತಂಗಳನ್ನವಾದರೂ ತೃಪ್ತಿ ನೀಡುತ್ತದೆ. ಒಂದು ಬಾರಿ ಆ ಹಸಿವು ನೀಗಿದರೆ ಅವನಿಗೆ ಶೃಂಗಾರ, ಬಟ್ಟೆ ಬರೆ, ಸಂಗಾತಿ ಬೇಕೆನಿಸುತ್ತದೆ. ಅವುಗಳು ಸಿಕ್ಕರೆ ಮುಂದಕ್ಕೆಆಸ್ತಿಅಂತಸ್ತು ಪದವಿ ಬೇಕೆನಿಸುತ್ತದೆ, ಹೀಗೆ ಬಯಕೆಗಳ ಒರತೆ ಮನುಜನ ಮನದಲ್ಲಿ ಎಂದಿಗೂ ಹಿಂಗದು ಎಂದು ಸ್ಪಷ್ಟಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"A hungry person is satisfied (temporarily) even if he is given stale food. But a person who has eaten wants to look good and have a companion. Later more needs come up like gold for ornaments, position of power, fame. The fountain of wants in his heart does not go dry even if he gets all of them." - Mankutimma [Translator's note: Maslov's hierarchy of needs : http://en.wikipedia.org/wiki/Maslow%27s_hierarchy_of_needs ]
Video Coming Soon
Detailed video explanations by scholars and experts will be available soon.