Back to List

Kagga 208 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬೆದಕಾಟ ಬದುಕೆಲ್ಲ; ಚಣಚಣವು ಹೊಸ ಹಸಿವು । ಅದಕಾಗಿ ಇದಕಾಗಿ ಮತ್ತೊಂದಕಾಗಿ ॥ ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ । ಕುದಿಯುತಿಹುದಾವಗಂ - ಮಂಕುತಿಮ್ಮ ॥ ೨೦೮ ॥

bedakATa badukella; chaNa chaNavu hosa hasivu । adakAgi idakAgi mattondakAgi ॥ adhikAra siri sogasu kIrtigaLa nenedu mana । kuduyutihudu Avagam - Mankutimma ॥ 208 ॥

Meaning in Kannada

ಪ್ರತೀ ಕ್ಷಣವೂ ನಾವುಗಳೆಲ್ಲ ಹೊಸ ಹೊಸ ಯೋಜನೆಗಳು, ಯೋಚನೆಗಳು, ಆಸೆಗಳು, ಆಕಾಂಕ್ಷೆಗಳನ್ನು ಹೊತ್ತು, ಇದನ್ನೋ, ಅದನ್ನೋ ಅಥವಾ ಮತ್ಯಾವುದನ್ನೋ ಪಡೆಯುವುದಕ್ಕೆ ಪರದಾಡುತ್ತಿರುತ್ತೇವೆ. ಈ ಪರದಾಟ, ಅಧಿಕಾರ ಸಂಪತ್ತು, ಅಂದ ಚೆಂದ ಅಥವಾ ಕೀರ್ತಿಗಳಂತಹ ವಿಚಾರಗಳನ್ನು ನೆನೆದು ನಮ್ಮ ಮನಸ್ಸುಗಳು ಕುದಿಯುತ್ತಿರುತ್ತವೆ ಎಂಬ ವಿಷಯವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"Life is a struggle all alonng. Every second we have new hunger. For this, for that and for something else. Sometimes it is for power, or wealth, or splendor, or fame. Mind is always restless thinking about them." - Mankutimma ಆಸೆ,Desire

Themes

LifeDeathSufferingWarPeace

Video Section

Video Coming Soon

Detailed video explanations by scholars and experts will be available soon.