Mankutimmana Kagga by D.V. Gundappa
ಕನಲ್ದ ಹುಲಿ ಕೆರಳ್ದ ಹರಿ ಮುಳ್ ಕರಡಿ ಛಲನಾಗ । ಅಣಕು ಕಪಿ ಸೀಳ್ನಾಯಿ ಮೊದಲಾದ ಮೃಗದ ॥ ಸೆಣಸುಮುಸುಡಿಯ ಘೋರದುಷ್ಟಚೇಷ್ಟೆಗಳೆಲ್ಲ । ವಣಗಿಹುವು ನರಮನದಿ - ಮಂಕುತಿಮ್ಮ ॥ ೧೯೭ ॥
kanalda huli keraLda hari muL karaDi Chala nAga । aNaku kapi sILnAyi modalAda mRugada ॥ seNasu musuDiya ghOra duShTa chEShTegaLu ellavu । aNagihavu naramanadi - Mankutimma ॥ 197 ॥
ಕೋಪಗೊಂಡ ಹುಲಿ, ಕೆರಳಿದ ಸಿಂಹ, ಮುಳ್ಳಿನ ಕರಡಿ, ಛಲ ಹಿಡಿದ ನಾಗರಹಾವು, ಚೇಷ್ಟೆಯ ಕಪಿ, ಬೇಟೆಯಾಡುವ ಸೀಳು ನಾಯಿ ಮೊದಲಾದ ಮೃಗಗಳ೦ತೆ ಹೋರಾಡುವ ಮುಖವಾಡ ಹೊತ್ತು ಘೋರವಾದ ದುಷ್ಟತೆಯಿಂದ ಕೂಡಿದ ಚೇಷ್ಟೆಗಳೆಲ್ಲ ಈ ಮಾನವನ ಮನಸ್ಸಿನಲ್ಲಿ ಅಡಗಿವೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.
"A hurt tiger, an angry lion, porcupine, adamant cobra, mimicking monkey, raging dog and other animals with their frightening fighting rogue faces are all hidden inside a man's mind." - Mankutimma
Video Coming Soon
Detailed video explanations by scholars and experts will be available soon.