Mankutimmana Kagga by D.V. Gundappa
ಪ್ರಾರಾಬ್ಧಕರ್ಮಮುಂ ದೈವಿಕದ ಲೀಲೆಯುಂ । ತೋರುವುವದೃಷ್ಟವಿಧಿಯೆಂಬ ಪೆಸರುಗಳಿಂ ॥ ಆರುಮಳೆವವರಿಲ್ಲವವುಗಳಾವೇಗಗಳ । ಪೌರುಷವು ನವಸತ್ತ್ವ - ಮಂಕುತಿಮ್ಮ ॥ ೧೫೩ ॥
prArAbda karmamum daivikada lIleyum । tOruvuvu adRuShTa vidhiyemba pesarugaLim ॥ Arum aLevavarillavu avugaLa AvEgagaLa । pauruShavu navasattva - Mankutimma ॥ 153 ॥
ಪೂರ್ವ ಮತ್ತು ಪೂರ್ವಜನ್ಮ ಕರ್ಮವು ನಮಗೆ ಪ್ರಾಪ್ತವಾಗುವುದು ಒಂದು ದೈವೀ ಕ್ರಿಯೆ. ಕಾಣಲು ಸಾಧ್ಯವಿಲ್ಲವಾದ್ದರಿಂದ ಇದನ್ನು ದೈವಲೀಲೆಯನ್ನಬೇಕು. ಅದನ್ನು ಅದೃಷ್ಟ( ಕಣ್ಣಿಗೆ ಕಾಣದ್ದು ಎಂದು ಅರ್ಥ) ಅಥವಾ ವಿಧಿ ಎಂದು ಕರೆಯಲ್ಪಡುತ್ತದೆ. ಅವುಗಳ ಚಲನೆ ಮತ್ತು ವೇಗವನ್ನು ಯಾರಿಂದಲೂ ಅಳೆಯಲು ಸಾಧ್ಯವಿಲ್ಲ. ಸ್ವಪ್ರಯತ್ನದಿಂದ ಹೊಸತನವನ್ನು ಕಂಡುಕೊಳ್ಳಬಹುದು ಎಂದು ಈ ಕಗ್ಗದ ಹೂರಣ.
"Results of actions done in past life and acts of Providence will manifest in our life as luck, fate and other unpredictable, non-measurable events. Of the three forms of the cosmic spirit, only the Human Effort is new and pertains to the present." - Mankutimma
Video Coming Soon
Detailed video explanations by scholars and experts will be available soon.