Mankutimmana Kagga by D.V. Gundappa
ಸೃಷ್ಟಿಕಥೆ ಕಟ್ಟುಕಥೆ; ವಿಲಯಕಥೆ ಬರಿಯ ಕಥೆ । ಹುಟ್ಟುಸಾವುಗಳೊಂದೆ ಪುರುಳಿನೆರಡು ದಶೆ ॥ ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯೆ । ಸತ್ಯ ಜಗದಲಿ ಕಾಣೊ - ಮಂಕುತಿಮ್ಮ ॥ ೧೩೯ ॥
sRuShTi kathe kaTTu kathe; vilaya kathe bariya kathe । huTTu sAvugaLu onde puruLina eradu dashe ॥ nityaparivartaneye chaitanya nartaneye । satya jagadali kANo - Mankutimma ॥ 139 ॥
ಸೃಷ್ಟಿ ಎನ್ನುವುದು, ಲಯ ಎನ್ನುವುದು, ಹುಟ್ಟು ಸಾವು ಎನ್ನುವುದು ಕೇವಲ ಕಲ್ಪನಾ ಕಥೆಗಳಷ್ಟೇ, ಪ್ರತಿನಿತ್ಯ ಪರಿವರ್ತನೆಯಾಗುವುದೇ ಸತ್ಯ ಈ ಜಗದಲ್ಲಿ. ಅದ್ದನ್ನು ಕಾಣು ಎಂದು ಮಾನ್ಯ ಗುಂಡಪ್ಪನವರು ಒಂದು ಆದೇಶವನ್ನು ನಮಗೆ ಕೊಡುತ್ತಾರೆ ಈ ಕಗ್ಗದಲ್ಲಿ.
"The story of creation is a built-up story. The story of destruction is nothing more than a story. Birth and death are the same. They are two states of the same truth. See the ultimate truth in this world in the form of constant change and the dance of energy." - Mankutimma
Video Coming Soon
Detailed video explanations by scholars and experts will be available soon.