Mankutimmana Kagga by D.V. Gundappa
ಶಿವಸೌಖ್ಯಸೌಂದರ್ಯಗಳ ಪೂರ್ಣರವಿ ಬೊಮ್ಮ । ಭುವನಜೀವನಜಲಧಿಯೂರ್ಮಿಕೋಟಿಯಲಿ ॥ ಛವಿಕೋಟಿಯೆರಚಲ್ ಪ್ರತಿಚ್ಛಾಯೆ ವಿಲಸಿಪುದು । ಸವಿ ನಮ್ಮದದರ ಕಣ - ಮಂಕುತಿಮ್ಮ ॥ ೧೨೭ ॥
shiva sauKhya saundaryagaLa pUrNaravi bomma । bhuvana jIvana jaladhiya UrmikOTiyali ॥ Chavi kOTiyerachal praticChAye vilisipudu । savi nammadadara kaNa - Mankutimma ॥ 127 ॥
ಶುಭ ಸಂತೋಷ ಸೌಂದರ್ಯಗಳ ಪೂರ್ಣರೂಪವೇ ಆ ಪರಮಾತ್ಮ. ಈ ಜಗತ್ತಿನ ಜೀವನವೆಂಬ ಸಮುದ್ರದಲ್ಲಿರುವ ಕೋಟ್ಯಾನುಕೋಟಿ ಜೀವಬಿಂದುಗಳಲ್ಲಿ, ಆ ಪರಮ ಕಾಂತಿಯ ಛಾಯೆ ಕಾಣುವುದು ಅಥವಾ ವಿಲಾಸಿಸುವುದು. ನಾವೂ ಸಹ ಆ ಛಾಯೆಯ ಒಂದು ಕಣ ಮಾತ್ರವೆಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.
"The creator represents all that is auspicious, pleasing and beauty. He is like a Sun full with brightness representing the three qualities. He showers his rays of splendor on the crores of waves in sea of life on this earth. With such rays the world reflects with splendor. For our eyes, this reflection itself is a pleasure." - Mankutimma
Video Coming Soon
Detailed video explanations by scholars and experts will be available soon.