Back to List

Kagga 112 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿಕಣ । ಸ್ತಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ ॥ ಶಮದ ಸುಂದರದ ಸಾತ್ತ್ವಿಕದ ಗಾಂಭೀರ್ಯವದು । ನಮಗೊಂದು ವೇದನಿಧಿ - ಮಂಕುತಿಮ್ಮ ॥ ೧೧೨ ॥

himagiriyoLu avitihudu chaitanyada agni kaNa । stimitadim nintirpudadu dhareya hitake ॥ shamada sundarada sAttvikada gAmbhIryavu adu । namagondu vEdanidhi - Mankutimma ॥ 112 ॥

Meaning in Kannada

ಬೃಹತ್ತಾದ ಹಿಮಾಲಯ ಪರ್ವತದ ಗರ್ಭದಲ್ಲೂ ಸಹ ಒಂದು ಚೈತನ್ಯದ ಅಗ್ನಿ ಅಡಗಿದೆ. ಅದು ಸ್ಥಿರವಾಗಿ, ಸ್ಥಿಮಿತದಿಂದ, ನಿಂತಿದೆ. ಈ ಭೂಮಿಯನ್ನು ಕಾಪಾಡುವುದಕ್ಕಾಗಿಯೇ!! ಶಾಂತ, ಸುಂದರ ಮತ್ತು ಸಾತ್ವಿಕ ಗಾಂಭೀರ್ಯದ ನಿಲುವಿನಲ್ಲಿ ನಿಂತಿರುವ ಆ ಹಿಮಾಲಯವು ನಮಗೆ ಜ್ಞಾನದ ಪ್ರತೀಕವಾಗಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

Even inside the inanimate snow capped mountains, hides a spark of energy. It is contained and calm for the good of the earth (not everything is this world should be living - for its own good). That is the beauty of tranquillity, purity, profundity and composure. It is a source of inspiration and knowledge. - Mankutimma.

Themes

WisdomLifeMoralityNaturePeace

Video Section

Video Coming Soon

Detailed video explanations by scholars and experts will be available soon.