ಪಟ್ಟಿಗೆ ಹಿಂತಿರುಗಿ

ಕಗ್ಗ 941 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ । ವೆಂಕನಿಗೊ ಕಂಕನಿಗೊ ಶಂಕರಾರ್ಯನಿಗೊ ॥ ಅಂಕಿತವ ಮಾಳ್ಕೆ ಜನರವರೋದಿದರೆ ಸಾಕು । ಶಂಕೆ ನಿನಗೇನಿಹುದೊ - ಮಂಕುತಿಮ್ಮ ॥ ೯೪೧ ॥

mankutimmana hesaru binkakke sAladene । venkanigo kankanigo shankarAryanigo ॥ ankitava mALke janaravaru Odidare sAku । shanke ninagEnihudo - Mankutimma ॥ 941 ॥

ಕನ್ನಡದಲ್ಲಿ ಅರ್ಥ

ಒಂದು ಹೆಸರಿಡಬೇಕು ಎನ್ನುವ ಬಿಂಕಕ್ಕೆ ‘ ಮಂಕುತಿಮ್ಮ’ನ ಹೆಸರು ಸಾಲದೇನು? ಅದಕ್ಕೆ ವೆಂಕಟರಮಣ, ಧರ್ಮರಾಯ ಅಥವಾ ಶಂಕಾರಾಚಾರ್ಯರಂತಹ ಖ್ಯಾತ ಹೆಸರುಗಳನ್ನೇ ಅಂಕಿತವನ್ನಾಗಿ ಇಡಬೇಕೇನು? ಹೆಸರಿಗಿಂತ ತತ್ವವನ್ನು ಮತ್ತು ಸತ್ವವನ್ನು ಅರಿಯಬೇಕೆಂದು ಜನರು ಓದಿದರೆ ಸಾಕು, ಅದರೊಳಗೆ ನಿನಗೇನೂ ಅನುಮಾನ ? ಎಂದು ಹೆಸರಿಗಿಂತ ಬರಹದಲ್ಲಿನ ತಿರುಳು ಮುಖ್ಯ ಎನ್ನುವಂತೆ ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

ಅರ್ಥ ಮತ್ತು ವ್ಯಾಖ್ಯಾನ

If you don't think that 'mankutimma' does not suit well as a pen name, you can change it more serious names - venka (Lord Venkateshvara), kanka (Dharmaraya) or shankaraarya (Adi Shankara). If people read it that is enough. Why do you have any doubts on whether people will accept it as-is or not? - Mankutimma

ವಿಷಯಗಳು

MoralitySociety

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.