ಪಟ್ಟಿಗೆ ಹಿಂತಿರುಗಿ

ಕಗ್ಗ 937 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಹೃದ್ಯ ಹೃದಯೇಂಗಿತಕೆ ರಾಗ ತಾಳದ ಕಟ್ಟು । ಗದ್ಯ ಲೌಕಿಕ ತಾತ್ವಿಕಕ್ಕಚ್ಚುಕಟ್ಟು ॥ ಮಧ್ಯದಲಿ ಮಿಸುಕಿ, ನೆಲಬಿಟ್ಟು ಬಾನ್ ಮುಟ್ಟದಿಹ । ಪದ್ಯವಧಿಕಪ್ರಸಂಗಿ - ಮಂಕುತಿಮ್ಮ ॥ ೯೩೭ ॥

hRudya hRudaya ingitake rAga tALada kaTTu । gadya laukika tAtvikake achchukaTTu ॥ madhyadali misuki, nela biTTu bAn muTTadiha । padyavu adhika prasangi - Mankutimma ॥ 937 ॥

ಕನ್ನಡದಲ್ಲಿ ಅರ್ಥ

ನಮ್ಮ ‘ಹೃದಯ’ದ ಇಂಗಿತವನ್ನು ಅರುಹಲು, ರಾಗ ತಾಳ ಮತ್ತು ಲಯಗಳ ಚೌಕಟ್ಟಿನಲ್ಲಿರುವ ‘ಸಂಗೀತ’ ಮಾಧ್ಯಮವಾಗುತ್ತದೆ. ಲೌಕಿಕದ ತತ್ವಗಳನ್ನು ಹೇಳಲು, ಗದ್ಯ ಅಚ್ಚುಕಟ್ಟಾಗಿರುತ್ತದೆ. ಆದರೆ ಇವೆರಡರ ಮಧ್ಯೆ ಇದ್ದು ಇತ್ತ ಭೂಮಿಯ ಮೇಲೂ ನಿಲ್ಲಲಾಗದೆ ಅತ್ತ ಆಕಾಶಕ್ಕೂ ಎರಲಾಗದೆ ಇರುವ ‘ಪದ್ಯ’ ರೂಪ ಅಧಿಕಪ್ರಸಂಗಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಅರ್ಥ ಮತ್ತು ವ್ಯಾಖ್ಯಾನ

To touch one's heart and get its approval, a song that is composed with good music is the best. Prose is good to convey everyday happenings as well as deep philosophy. In between are poems - just like someone who has left eh ground and not yet met the sky. - Mankutimma

ವಿಷಯಗಳು

MoralityNatureLove

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.