ಪಟ್ಟಿಗೆ ಹಿಂತಿರುಗಿ

ಕಗ್ಗ 929 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಸದ್ದುಮಾಡದೆ ನೀನು ಜಗಕೆ ಬಂದವನಲ್ಲ । ಒದ್ದಾಟ ಗುದ್ದಾಟ ಬಾಳೆಲ್ಲವಾಯ್ತು ॥ ಗದ್ದಲವ ಬಿಡಲು ಕಡೆದಿನವಾನುಮಾದೀತೆ? । ನಿದ್ದೆವೊಲು ಸಾವು ಪಡೆ - ಮಂಕುತಿಮ್ಮ ॥ ೯೨೯ ॥

saddu mADade nInu jagake bandavanalla । oddATa guddATa bALellavAytu ॥ gaddalava biDalu kaDedinavAnumAdIte? । niddevolu sAva paDe - Mankutimma ॥ 929 ॥

ಕನ್ನಡದಲ್ಲಿ ಅರ್ಥ

ನೀನು ಈ ಜಗತ್ತಿಗೆ ಬರುವಾಗ ಸದ್ದುಮಾಡಿಕೊಂಡೇ ಬಂದವನು ಮತ್ತು ಬಾಳಿನುದ್ದಕ್ಕೂ ಗದ್ದಲದಲ್ಲೇ ಬದುಕಿದವನು. ಕಡೆಯಪಕ್ಷ ನಿನ್ನ ಅಂತಿಮ ಕ್ಷಣದಲ್ಲಾದರೂ ಈ ಗದ್ದಲದಿಂದ ಹೊರಬಂದು ನಿದ್ರೆಯಂತಹ ಸಾವನ್ನು ಪಡೆ ಎಂದು ಸೂಚಿಸಿದ್ದಾರೆ, ಮಾನ್ಯ ಗುಂಡಪ್ಪನವರು.

ಅರ್ಥ ಮತ್ತು ವ್ಯಾಖ್ಯಾನ

You did not come into this world silently. All your life you have been struggling and fighting. Can let this chaos be at least on your last day? Pray for a death in your sleep. - Mankutimma

ವಿಷಯಗಳು

LifeDeathWar

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.