ಪಟ್ಟಿಗೆ ಹಿಂತಿರುಗಿ

ಕಗ್ಗ 923 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ನಿನಗಾರು ಗುರುವಹರು? ನೀನೊಬ್ಬ ತಬ್ಬಲಿಗ । ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು ॥ ದಿನವ ಕಳೆ; ಗುರುಶಿಷ್ಯಪಟ್ಟಗಳು ನಿನಗೇಕೆ? । ನಿನಗೆ ನೀನೇ ಗುರುವೊ - ಮಂಕುತಿಮ್ಮ ॥ ೯೨೩ ॥

ninagAru guruvaharu? nInobba tabbaliga । uNuta dAriya keladi sikkida enjilanu ॥ dinava kaLe; guru shiShya paTTagaLu ninagEke? । ninage nInE guruvo - Mankutimma ॥ 923 ॥

ಕನ್ನಡದಲ್ಲಿ ಅರ್ಥ

ನಿನಗೆ ಯಾರು ಗುರುವಾಗುತ್ತಾರೆ? ನೀನೊಬ್ಬ ಗತಿಯಿಲ್ಲದವ. ದಾರಿಯಲ್ಲಿ ಸಿಕ್ಕಿದೆಂಜಲನ್ನು ತಿನ್ನುತ್ತ ದಿನವನ್ನು ದೂಡು. ನಿನಗೊಬ್ಬ ಗುರು, ನೀನೊಬ್ಬ ಶಿಷ್ಯ ಎಂಬ ಪಟ್ಟಗಳು ನಿನಗೇಕೆ? ನಿನಗೆ ನೀನೆ ಗುರುವೋ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

Who can be your teacher? You are an orphan. You learn from anyone who is willing to teach - just like eating left overs from anyone. Lead your life thus. Why do you need a named relationship - teacher and student? You are your own teacher. - Mankutimma

ವಿಷಯಗಳು

LifeSociety

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.