ಮಂಕುತಿಮ್ಮನ ಕಗ್ಗ by D.V. Gundappa
ಆರಲೆನ್ನಯ ಹೃದಯ ಕರಣಗಳ ಕಾವುಗಳು । ಸೇರಲೆನ್ನಯ ಜೀವ ವಿಶ್ವಜೀವದಲಿ ॥ ಧಾರುಣಿಯ ಮಡಿಲೆನ್ನ ಕೊಳಲಿ; ಜಗ ಮರೆತಿರಲಿ । ಹಾರಯಿಸು ನೀನಿಂತು - ಮಂಕುತಿಮ್ಮ ॥ ೯೨೦ ॥
aarali ennaya hRudaya karaNagaLa kAvugaLu । sErali ennaya jIva vishva jIvadali ॥ dhAruNiya maDilu enna koLali; jaga maretirali । hArayisu nInu intu - Mankutimma ॥ 920 ॥
"ಪುಟಿದು ಕುಣಿದೇಳುವ ನನ್ನ ಮನಸ್ಸು ಬುದ್ಧಿ ಮತ್ತು ದೇಹದ ತುಡಿತಗಳೆಲ್ಲವೂ ಶಾಂತವಾಗಲಿ. ನನ್ನ ಜೀವ ವಿಶ್ವಾತ್ಮದಲ್ಲಿ ಸೇರಲಿ. ಭೂಮಿ ನನ್ನನ್ನು ತನ್ನೊಳಗೆ ಸೇರಿಸಿಕೊಳ್ಳಲಿ ಮತ್ತು ಜಗತ್ತು ನನ್ನನ್ನು ಮರೆತುಹೋಗಲಿ," ಎನ್ನುವಂತಹ ಬಯಕೆಗಳನ್ನಿಟ್ಟುಕೋ ಎಂದು, ಬದುಕಿನಿಂದ ನಿರ್ಗಮಿಸುವಾಗ ಯಾವ ರೀತಿಯ ಮನೋಭಾವವಿಟ್ಟುಕೊಳ್ಳಬೇಕೆಂಬುದರ ಸೂಚನೆ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
One must pray thus: Let the anxiety in my heart and restlessness in my senses die down. Let my life dissolve in the life of the world. Let the earth accept me in its womb. Let the world forget me. - Mankutimma
ವೀಡಿಯೊ ಶೀಘ್ರದಲ್ಲಿ ಬರುತ್ತಿದೆ
ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.