ಪಟ್ಟಿಗೆ ಹಿಂತಿರುಗಿ

ಕಗ್ಗ 899 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಜಗದೀ ಜಗತ್ತ್ವವನು, ಮಾಯಾವಿಚಿತ್ರವನು । ಒಗೆದಾಚೆ ಬಿಸುಡೆಲ್ಲ ಕರಣವೇದ್ಯವನು ॥ ಮಿಗುವುದೇಂ? ರೂಪಾಖ್ಯೆಯೊಂದುಮಿಲ್ಲದ ವಸ್ತು । ಹೊಗಿಸಾ ಕಡೆಗೆ ಮತಿಯ - ಮಂಕುತಿಮ್ಮ ॥ ೮೯೯ ॥

jagada ii jagattvavanu, mAyA vichitravanu । ogedu aache bisuDu ella karaNa vEdyavanu ॥ miguvudEm? rUpAkhyeyondum illada vastu । hogisA kaDege matiya - Mankutimma ॥ 899 ॥

ಕನ್ನಡದಲ್ಲಿ ಅರ್ಥ

ಜಗತ್ವದಿಂದ(ಜಗತ್ ತತ್ವ) ಆಗಿರುವ ಈ ಜಗತ್ತಿನ ಚಿತ್ರ ವಿಚಿತ್ರವಾದ ಮಾಯಾ ಚಿತ್ರವನ್ನು ತೆಗೆದು ಬಿಸಾಡು, ನಿನಗೆ ಈ ಜಗತ್ತಿನ ಅರಿವುಂಟಾಗಿಸುವ ಎಲ್ಲ ಉಪಕರಣಗಳನ್ನೂ ಒಗೆಯಾಚೆ. ನಂತರ ಮಿಗುವುದು ಏನು? ರೂಪ, ಹೆಸರು ಮುಂತಾದವುಗಳಾವುದೂ ಇಲ್ಲದ ಒಂದು ವಸ್ತು. ಅದನ್ನು ಅರಿಯಲು ನಿನ್ನ ಬುದ್ಧಿಯನ್ನು ಆ ಕಡೆ ತಿರುಗಿಸು ಎಂದು ಉಪದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"Keep aside all things worldly about this world - the matter, the illusion and so on. Throw away everything that is perceived by senses only. What is left is the universal truth - something that has no form and dependence. Let your mind flow towards that." - Mankutimma

ವಿಷಯಗಳು

WisdomLifeDeathWar

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.