ಪಟ್ಟಿಗೆ ಹಿಂತಿರುಗಿ

ಕಗ್ಗ 852 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ನವನವ ಪ್ರಶ್ನೆಗಳು, ನವನವ ಪರೀಕ್ಷೆಗಳು । ದಿವಸಾಬ್ದಯುಗ ಚಕ್ರ ತಿರುತಿರುಗಿದಂತೆ ॥ ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ । ಅವಿರತದ ಚೈತನ್ಯ - ಮಂಕುತಿಮ್ಮ ॥ ೮೫೨ ॥

nava nava prashnegaLu, navanava parIkShegaLu । divasAbda yuga chakra tiru tirugidante ॥ pravahippuvu adarante pauruSha hita prajne । aviratada chaitanya - Mankutimma ॥ 852 ॥

ಕನ್ನಡದಲ್ಲಿ ಅರ್ಥ

ದಿನ, ವರುಷ ಯುಗಗಳು ಕಳೆದಂತೆ ಮನುಷ್ಯನ ಮನಸ್ಸಿನಲ್ಲಿ ಹೊಸ ಹೊಸ ಪ್ರಶ್ನೆಗಳು ಉದ್ಭವಿಸುತ್ತವೆ ಮತ್ತು ಅವನು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾನೆ. ಹೀಗೆ ಆತ್ಮಹಿತವನ್ನು ವೃದ್ಧಿಗೊಳಿಸಿಕೊಳ್ಳಲು, ಆ ಪರತತ್ವದ ಚೈತನ್ಯ ನಿರಂತರ ಕೃಷಿ ಮಾಡುತ್ತಲೇ ಇರುತ್ತದೆ ಎನ್ನುವುದೇ ಈ ಮುಕ್ತಕದ ಹೂರಣ.

ಅರ್ಥ ಮತ್ತು ವ್ಯಾಖ್ಯಾನ

"Every day, every year, every epoch, as time flows - there will be new questions, new tests to mankind. In response to these times, mankind's efforts and his evaluation of happiness has changed. Only thing that is constant is the unending energy flow." - Mankutimma

ವಿಷಯಗಳು

Death

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.