ಪಟ್ಟಿಗೆ ಹಿಂತಿರುಗಿ

ಕಗ್ಗ 817 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಮರವ ನೀನರಿಯುವೊಡೆ ಬುಡವ ಕೀಳಲು ಬೇಡ । ತರಿಯಬೇಡೆಲೆಕಡ್ಡಿಗಳ ಪರೀಕ್ಷಣಕೆ ॥ ಎರೆ ನೀರ, ಸುರಿ ಗೊಬ್ಬರವ, ಕೆದಕು ಪಾತಿಯನು । ನಿರುಕಿಸುತ ತಳಿರಲರ - ಮಂಕುತಿಮ್ಮ ॥ ೮೧೭ ॥

marava nInu ariyuvoDe buDava kILalu bEDa । tariya bEDa ele kaDDIgaLa parIKshaNake ॥ ere nIra, suri gobbarava, kedaku pAtiyanu । nirukisuta taLiru alara - Mankutimma ॥ 817 ॥

ಕನ್ನಡದಲ್ಲಿ ಅರ್ಥ

ಒಂದು ಮರವನ್ನು ಅರಿಯಲು ಅದರ ಬುಡವನ್ನು ಕೀಳಬೇಡ. ಅದರ ಎಲೆ ಮತ್ತು ಕಡಿಗಳನ್ನು ಪರೀಕ್ಷಿಸಲೆಂದು ತರಿಯಬೇಡ. ಬದಲಾಗಿ ಅದಕ್ಕೆ ನೀರನ್ನು ಹಾಯಿಸು, ಅದರ ಪಾತಿಯನ್ನು ಕೆದಕಿ ಸ್ವಲ್ಪ ಗೊಬ್ಬರವನ್ನು ಕೊಟ್ಟು ಅದರಲ್ಲಿ ಚಿಗುರುವ ಎಲೆಗಳ ಮೇಲಿಂದ ಬೀಸುವ ತಂಪಾದ ಮಂದಮಾರುತವನ್ನು ನಿರೀಕ್ಷಿಸು, ಎಂದು ಹೇಳುತ್ತಾ ಈ ಜಗತ್ತೆಂಬ ಹೂದೋಟದಲ್ಲಿ ನಾವು ಹೇಗಿರಬೇಕು ಎನ್ನುವುದಕ್ಕೆ ಒಂದು ದೃಷ್ಟಾಂತದ ಮೂಲಕ ವಿವರಿಸಿದ್ದಾರೆ.

ಅರ್ಥ ಮತ್ತು ವ್ಯಾಖ್ಯಾನ

"If you want to know a tree well, don't pluck its roots. Don't tear its leaves and branches. Instead - water it, pour some manure, plough its bankings - enjoy touching its fresh sprouts and flowers. That is a good way to know the trees." - Mankutimma

ವಿಷಯಗಳು

MoralityFateNatureDetachment

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.