ಪಟ್ಟಿಗೆ ಹಿಂತಿರುಗಿ

ಕಗ್ಗ 776 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ । ಚರಿಸುತಿರೆ ನರನದರ ಗುರುತನರಿಯದೆಯೆ ॥ ಧರೆಯದದು ತನ್ನಂದದ ಪ್ರಾಣಿಯೆಂದೆಣಿಸಿ । ತೊರೆಯುವನು ದೊರೆತುದನು - ಮಂಕುತಿಮ್ಮ ॥ ೭೭೬ ॥

paripariya rUpadali paradaiva kaNmunde । charisutire naranu adara gurutanu ariyadeye ॥ dhareyadadu tanna andada prANiyendu eNisi । toreyuvanu doretudanu - Mankutimma ॥ 776 ॥

ಕನ್ನಡದಲ್ಲಿ ಅರ್ಥ

ವಿದವಿದವಾದ ರೂಪಗಳನ್ನು ಹೊತ್ತು ಆ ಪರದೈವ ಕಣ್ಣ ಮುಂದೆಯೇ ಓಡಾಡುತ್ತಾ ಇದ್ದರೂ ಅದರ ಗುರುತನ್ನು ತಿಳಿಯಲಾಗದೆ, ಅದೂ ಸಹ ಭೂಮಿಯ ಮೇಲೆ ಓಡಾಡುವ ತನ್ನಂತಹ ಮತ್ತೊಂದು ಪ್ರಾಣಿ, ಎಂದು ತಿಳಿದು ಕೈಗೆ ಸಿಕ್ಕ ದೈವವನ್ನು ಬಿಟ್ಟು ಬಿಡುತ್ತಾನೆ, ಮನುಷ್ಯ ಎಂದು ಸರ್ವಾತ್ಮಾನುಭವದ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

God comes in front of us in different forms. Man does not recognize it. He thinks it just another beautiful creature of this world. He will let go of it even after getting it. - Mankutimma

ವಿಷಯಗಳು

DevotionLifeDetachment

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.