ಪಟ್ಟಿಗೆ ಹಿಂತಿರುಗಿ

ಕಗ್ಗ 749 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಪರಮಲಾಭವ ಗಳಿಸೆ ಜೀವಿತವ್ಯಾಪಾರ । ಕಿರಬೇಕು ಮೂಲಧನವದು ತತ್ತ್ವದೃಷ್ಟಿ ॥ ಚಿರಲಾಭ ಜಗದಾತ್ಮಲೀಲಾವಿಹಾರಸುಖ । ಧರೆಯ ಸುಖ ಮೇಲ್ ಬಡ್ಡಿ - ಮಂಕುತಿಮ್ಮ ॥ ೭೪೯ ॥

paramalAbhava gaLise jIvita vyApArake । irabEku mUladhanavadu tattvadRuShTi ॥ chira lAbha jagada aatma lIlA vihArasukha । dhareya sukha mEl baDDi - Mankutimma ॥ 749 ॥

ಕನ್ನಡದಲ್ಲಿ ಅರ್ಥ

ಬದುಕಿನ ವ್ಯಾಪಾರದಲ್ಲಿ ಅತ್ಯುತ್ತಮ ಲಾಭವನ್ನು ಗಳಿಸಲು ‘ತತ್ವದೃಷ್ಟಿ’ಯೇ ನಮ್ಮ’ಮೂಲಧನ’ವಾಗಬೇಕು. ಪರಮಾತ್ಮಾನುಭವವೇ ಶಾಶ್ವತ ಲಾಭ. ಧರೆಯಮೇಲಿನ ಸುಖವು ಕೇವಲ ಮೇಲಿನ ಬಡ್ಡಿ ಎಂದು, ‘ಪರಮಸುಖ’ವಾವುದು ಎನ್ನುವುದನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

In this business of life, there is a way to make ultimate profit. The capital one needs is the understanding of the working of the world - unified theory of existence. The capital appreciation is in the form of the opportunity to participate in the grand illusion of world and enjoy it. The bonus interest are the pleasures we get to enjoy in this world while we are part of the illusion. - Mankutimma

ವಿಷಯಗಳು

WisdomLifeMoralityPeaceDuty

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.