ಪಟ್ಟಿಗೆ ಹಿಂತಿರುಗಿ

ಕಗ್ಗ 737 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಎಂದಿಗಾನುಂ ನಿನ್ನ ಪೂರ್ವಋಣಗಳ ಲೆಕ್ಕ । ನೊಂದಬೇಕೆಂದಿರ್ದೊಡಿಂದೆ ಮೊದಲನಿಡು ॥ ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ । ಹೊಂದು ವಿಶ್ವಾತ್ಮತೆಯ - ಮಂಕುತಿಮ್ಮ ॥ ೭೩೭ ॥

endigAnum ninna pUrva RuNagaLa lekka । nondabEkendu irdoDe inde modalaniDu ॥ andisiko herar eniparanu hRudaya vistarade । hondu vishvAtmateya - Mankutimma ॥ 737 ॥

ಕನ್ನಡದಲ್ಲಿ ಅರ್ಥ

‘ಎಂದಿಗಾದರೂ ನಿನ್ನ ಪೂರ್ವ ಕರ್ಮಗಳ ಲೆಕ್ಕಾಚಾರವನ್ನು ನೋಡಿ ಮುಗಿಸಬೇಕೆಂದೆನಿಸಿದರೆ, ಆ ದಿಕ್ಕಿನಲ್ಲಿ ಮೊದಲ ಹೆಜ್ಜೆಯನ್ನು ಇಂದೇ ಇಡು. ಹೃದಯ ವಿಸ್ತಾರದಿಂದ ಅನ್ಯರನ್ನು ಎಟುಕಿಸಿಕೋ. ಜಗತಾತ್ಮತೆಯನ್ನು ಹೊಂದು, ಅನುಭವಿಸು ಎಂದು, ಬದುಕಿನ ಭಾರವನ್ನು ಕಳೆದುಕೊಂಡು, ವೈಶಾಲ್ಯತುಂಬಿದ ಜೀವನದ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

If there is some debt from previous actions (from any births) that is yet to be repaid, then make a start right now. Embrace those who keep you away by expanding your self-consciousness. There by you will expand yourself and realize that the whole world is one. - Mankutimma

ವಿಷಯಗಳು

WisdomLifeMoralitySelf

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.