ಪಟ್ಟಿಗೆ ಹಿಂತಿರುಗಿ

ಕಗ್ಗ 721 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ । ಧರಣಿಯವು, ಗಗನದವು, ಮನುಜಯತ್ನದವು ॥ ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ । ಅರಿವುಳ್ಳೊಲುಮೆ ಪಿರಿದು - ಮಂಕುತಿಮ್ಮ ॥ ೭೨೧ ॥

mereyuvuvu nUrAru maimegaLu sRuShTiyali। dharaNiyavu, gaganadavu, manuja yatnadavu ॥ piridembenu avugaLoLu dharumava aritavana olume । arivuLLa olume piridu - Mankutimma ॥ 721 ॥

ಕನ್ನಡದಲ್ಲಿ ಅರ್ಥ

ಈ ಜಗತ್ತಿನ ಸೃಷ್ಟಿಯಲಿ ನೂರಾರು ಮಹಿಮೆಗಳಿವೆ. ಇವುಗಳಲ್ಲಿ ಭೂಮಿಯದು ಹಲವು ಗಗನದ್ದು ಹಲವು, ಮನುಷ್ಯ ಪ್ರಯತ್ನದ ಸಾಧನೆಗಳಲ್ಲಿ, ಮಹತ್ತಾದ ಸಾಧನೆ ‘ಧರ್ಮವನ್ನು’ ಅರಿತವನ ಒಲುಮೆ ಅಥವಾ ಪ್ರೀತಿ. ಅಂತಹ ಧರ್ಮಯುಕ್ತವಾದ ಪ್ರೀತಿಯಲ್ಲಿ ‘ಅರಿವು’ ಎಂದರೆ ಜ್ಞಾನವೂ ಸೇರಿಕೊಂಡರೆ ಅದು ಅತೀ ಉತ್ತಮವಾದ ಸಾಧನೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

ಅರ್ಥ ಮತ್ತು ವ್ಯಾಖ್ಯಾನ

There are many a wonders in this creation - wonders of earth, the sky and that of human creation. Of all of them, I consider the love shown by person who knows (and follows) Dharma to be the greatest wonder. When one loves after realization (as opposed to love due to attachment) - it is great. - Mankutimma

ವಿಷಯಗಳು

MoralityNatureLove

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.