ಮಂಕುತಿಮ್ಮನ ಕಗ್ಗ by D.V. Gundappa
ಎಡವದೆಯೆ, ಮೈಗಾಯವಡೆಯದೆಯೆ, ಮಗುವಾರು । ನಡೆಯ ಕಲಿತವನು? ಮತಿನೀತಿಗತಿಯಂತು ॥ ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- । ದಡವಿಕೊಳುವವರೆಲ್ಲ - ಮಂಕುತಿಮ್ಮ ॥ ೬೯೮ ॥
eDavadeye, mai gaaya oDayadeye, maguvAru । naDeya kalitavanu? matinItigatiyantu ॥ taDavarisi muggarisi biddu matteddu । madaDavikoLuvavarella - Mankutimma ॥ 698 ॥
ನಡೆಯಲು ಪ್ರಯತ್ನಪಡುವ ಪ್ರತಿಯೊಂದು ಮಗುವೂ ತಡವರಿಸಿ, ಎಡವಿ, ಮುಗ್ಗರಿಸಿ, ಬಿದ್ದು ತಾನೇ ನಡೆಯುವುದನ್ನು ಕಲಿಯುವುದು. ಮಗು ಹೇಗೆ ಮತ್ತೆ ಮತ್ತೆ ಬಿದ್ದರೂ ಮೈದಡವಿಕೊಂಡು, ಮೇಲೆದ್ದು ನಡೆಯುವಂತೆ, ರೀತಿ, ನೀತಿಯನ್ನು, ಧರ್ಮ ಮಾರ್ಗವನ್ನು, ಬದುಕಿನ ತತ್ವವನ್ನು ಮತ್ತು ಪರತತ್ವನ್ನರಿಯಲು ಪ್ರಯತ್ನಿಸುವ ಪ್ರತಿಯೊಬ್ಬರೂ ಅಡೆ ತಡೆ ಎದುರಾದರೂ ಮತ್ತೆ ಮತ್ತೆ ಪ್ರಯತ್ನವನ್ನು ಮಾಡುತ್ತಾರೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
Is there any child that has learned to walk without ever having tripped, without breaking open a wound? Similar is the story of wisdom. One does err (and get hurt), regain composure - shake it off and continue. Troubles and setbacks are natural." - Mankutimma
ವೀಡಿಯೊ ಶೀಘ್ರದಲ್ಲಿ ಬರುತ್ತಿದೆ
ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.