ಪಟ್ಟಿಗೆ ಹಿಂತಿರುಗಿ

ಕಗ್ಗ 689 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ । ಧರ್ಮಸಂಕಟಗಳಲಿ, ಜೀವಸಮರದಲಿ ॥ ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ । ನಿರ್ಮಿತ್ರನಿರಲು ಕಲಿ - ಮಂಕುತಿಮ್ಮ ॥ ೬೮೯ ॥

orvanE niluve nInu utkaTa kShaNagaLali । dharma sankaTagaLali, jIva samaradali ॥ nirvANa dIkSheyali, niryANa ghaTTadali । nirmitraniralu kali - Mankutimma ॥ 689 ॥

ಕನ್ನಡದಲ್ಲಿ ಅರ್ಥ

ಬದುಕಿನ ಕ್ಲಿಷ್ಟತರವಾದ ಘಟ್ಟಗಳಲ್ಲಿ, ಧರ್ಮ ಸಂಕಟದ ಸ್ಥಿತಿಗಳಲ್ಲಿ, ಜೀವನದ ಹೋರಾಟದಲ್ಲಿ, ಪರಮಾರ್ಥ ಸಾಧನೆಯಲ್ಲಿ, ಮೃತ್ಯುವನ್ನೆದುರಿಸುವಾಗ, ನೀನು ಒಬ್ಬನೇ ನಿಲ್ಲಬೇಕಾಗುತ್ತದೆ, ಅನ್ಯರೇನು, ಮಿತ್ರರಿಂದಲೂ ಸಹಾಯ ಅಥವಾ ಸಲಹೆಗಳನ್ನು ಅಪೇಕ್ಷಿಸಬೇಡ ಎಂದು ಅತ್ಯುತ್ತಮ ಸಲಹೆನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

You will be standing alone in all the crucial moments od your life - when faced with moral dilemma, while fighting for life, at the moment of divine realization and at death. Learn to be friendless." - Mankutimma

ವಿಷಯಗಳು

DevotionLifeDeathSocietyWar

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.