ಪಟ್ಟಿಗೆ ಹಿಂತಿರುಗಿ

ಕಗ್ಗ 659 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಎಂದೊ ನಿನಗೊಂದುದಿನ ಮೂಗು ಮುರಿಯುವುದು ದಿಟ । ವೃಂದಾರಕರು ಮತ್ಸರಿಸರೆ, ಗರ್ವಿತರ? ॥ ಸಂದರ್ಭಗಳನದಕೆ ಜೋಡಿಪನು ವಿಧಿರಾಯ । ಅಂದಿಕೊಳ್ಳನೆ ನಿನ್ನ? - ಮಂಕುತಿಮ್ಮ ॥ ೬೫೯ ॥

endo ninage ondu dina mUgu muriyuvudu diTa । vRundArakaru matsarisare, garvitara? ॥ sandharbhagaLanu adake jODipanu vidhirAya । andikoLLane ninna? - Mankutimma ॥ 659 ॥

ಕನ್ನಡದಲ್ಲಿ ಅರ್ಥ

"ಮುಂದೆ ಎಂದಾದರೂ ಒಂದು ದಿನ ಖಂಡಿತ ನಿನಗೆ ಗರ್ವ ಭಂಗವಾಗುತ್ತದೆ. ನಿನ್ನ ಪ್ರತಿಷ್ಠೆ ಹೆಚ್ಚಾದರೆ ಆ ದೇವತೆಗಳು ನಿನ್ನ ನೋಡಿ ಈರ್ಷ್ಯೆಪಡುತ್ತಾರೆ ಮತ್ತು ವಿಧಿರಾಯ ನಿಮ್ಮ ಗರ್ವ ಭಂಗಕ್ಕೆ ಸರಿಯಾದ ಸಂದರ್ಭಗಳನ್ನು ಸೃಷ್ಟಿಸಿ ನಿನ್ನನ್ನು ಬಗ್ಗು ಬಡಿಯದೆ ಇರುವನೇ?" ಎಂದು ವಾಸ್ತವವಾಗಿ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದವರು ಅತಿಯಾಗಿ ತೋರುವ ಗರ್ವದ ಭಂಗ ಹೇಗಾಗುತ್ತದೆಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

ಅರ್ಥ ಮತ್ತು ವ್ಯಾಖ್ಯಾನ

One of these days in the future your pride will be definitely broken. It's only a matter of when. Will the Gods not be jealous of a person flaunting his power? Fate will bring together all circumstances to facilitate your downfall. Once everything is right, he shall embrace you." - Mankutimma

ವಿಷಯಗಳು

DevotionMoralityFate

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.