ಪಟ್ಟಿಗೆ ಹಿಂತಿರುಗಿ

ಕಗ್ಗ 627 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ವಿಷಯಸನ್ನಿಧಿಗಿಂತ ಮಸಣಸನ್ನಿಧಿ ಲೇಸು । ವಿಷದೂಟಕಿಂತುಪೋಷಿತವೆ ಲೇಸಲ್ತೆ? ॥ ತೃಷೆ ಕನಲೆ, ಜೀವ ಬಿಸಿಬಾಣಲಿಗೆ ಬಿದ್ದ ಹುಳು । ಶಿಶು ಪಿಶಾಚಿಯ ಕೈಗೆ - ಮಂಕುತಿಮ್ಮ ॥ ೬೨೭ ॥

viShaya sannidhiginta masaNa sannidhi lEsu । viShadUTakinta upOShitave lEsalte? ॥ tRuShe kanale, jIva bisibANalige bidda huLu । shishu pishAchiya kaige - Mankutimma ॥ 627 ॥

ಕನ್ನಡದಲ್ಲಿ ಅರ್ಥ

ಜಗತ್ತಿನ ವಿಷಯಗಳಲ್ಲಿ ಅತಿಯಾದ ಆಸಕ್ತಿಯಿಂದ ಬದುಕುವುದಕ್ಕಿಂತ ಮರಣವೇ ಉತ್ತಮ. ಹಾಗೆಯೇ ವಿಷದ ಊಟ ಮಾಡುವುದಕ್ಕಿಂತ, ಉಪವಾಸವಿರುವುದೇ ಉತ್ತಮ. ಮನುಷ್ಯನ ಆಸೆಗಳು ಕೆರಳಿದರೆ ಜೀವ ಕಾದ ಬಾಣಲಿಗೆ ಬಿದ್ದ ಹುಳುವಿನಂತೆ ವಿಲವಿಲ ಒದ್ದಾಡುತ್ತದೆ, ಪಿಶಾಚಿಯ ಕೈಗೆ ಸಿಕ್ಕ ಶಿಶುವಿನಂತೆ, ಎಂದು ಬದುಕಿನಲ್ಲಿ ಜೀವ ಹೇಗೆ ಒದ್ದಾಡುತ್ತದೆ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

It is better to die than be attracted to the material pleasures in this world. Isn't being hungry better than consuming poisoned food? When a man is controlled by desire, he is like a worm that falls into a hot vessel. He is like a baby in the hands of a demon." - Mankutimma

ವಿಷಯಗಳು

LifeDeath

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.