ಪಟ್ಟಿಗೆ ಹಿಂತಿರುಗಿ

ಕಗ್ಗ 615 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಹಾಲ ಕಾಯಿಸಿ ಹೆಪ್ಪನಿಕ್ಕಿ ಕಡೆದೊಡೆ, ಮೊದಲು । ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ ॥ ಬಾಳನೀ ಜಗದ ಮಂತುವು ಕಡೆಯಲೇಳುವುದು । ಆಳದಿಂದಾತ್ಮಮತಿ - ಮಂಕುತಿಮ್ಮ ॥ ೬೧೫ ॥

hAla kAyisi heppanikki kaDedoDe, modalu । mEle kANada beNNe tEli baruvante ॥ baLanI jagada mantuvu kaDeyaLu ELuvudu । aaLadinda aatma mati - Mankutimma ॥ 615 ॥

ಕನ್ನಡದಲ್ಲಿ ಅರ್ಥ

ಹಾಲನ್ನು ಕಾಯಿಸಿ, ಅದಕ್ಕೆ ಹೆಪ್ಪನ್ನು ಸೇರಿಸಿ ಅದು ಮೊಸರಾದಮೇಲೆ ಕಡೆದರೆ, ಮೊದಲು ಕಾಣದೆ ಇದ್ದ ಬೆಣ್ಣೆ, ತೇಲಿ ಮೇಲೆ ಬರುವಂತೆ ನಮ್ಮ ಬದುಕನ್ನು ಈ ಜಗತ್ತಿನಲ್ಲಿ ನಮಗಾಗುವ ಅನುಭವಗಳೆಂಬ ಕಡಗೋಲಿನಿಂದ ಕಡೆದಾಗ ನಮ್ಮೊಳಗಿಂದಲೇ ‘ಆತ್ಮಮತಿ’ ಹೊರಬರುತ್ತದೆ ಎಂದು ಬದುಕಿನ ಬವಣೆಗಳಿಂದ ನಾವು ಪಡೆಯಬಹುದಾದ ಜ್ಞಾನದ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

Butter is not visible in milk. Only when you heat it, leave it overnight to ferment and stir does it start floating. Life is like that. The world is a big stirrer. It will stir our lives and let the butter of inner wisdom of the soul come out." - Mankutimma

ವಿಷಯಗಳು

WisdomLifeDetachment

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.