ಪಟ್ಟಿಗೆ ಹಿಂತಿರುಗಿ

ಕಗ್ಗ 590 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಪುರುಷನ ಸ್ವಾತಂತ್ರ್ಯವವನ ತೋಳ್ಗಿರುವಷ್ಟು । ಪರಿಧಿಯೊಂದರೊಳದರ ಯತ್ನ ಕಡೆಯುಂಟು ॥ ತಿರುಗುವುದು ಮಡಿಸುವುದು ನಿಗುರುವುದು ನೀಳುವುದು । ತೊರೆದು ಹಾರದು ತೋಳು - ಮಂಕುತಿಮ್ಮ ॥ ೫೯೦ ॥

puruShana svAtantryavu avana tOLge iruvaShTu । paridhiyondaroLu adara yatna kaDeyunTu ॥ tiruguvudu madisuvudu niguruvudu nILuvudu । toredu hAtradu tOLu - Mankutimma ॥ 590 ॥

ಕನ್ನಡದಲ್ಲಿ ಅರ್ಥ

ಮನುಷ್ಯನ ಸ್ವಾತಂತ್ರ್ಯ, ಅವನ ಬಾಹುಗಳನ್ನು ಎಷ್ಟು ತಿರುಗಬಹುದೋ, ಎಷ್ಟು ಮಡಿಸಬಹುದೋ, ಎಷ್ಟು ನೆಟ್ಟಗಾಗಿಸಬಹುದೋ, ಎಷ್ಟು ನೀಟಬಹುದೋ, ಅಷ್ಟು. ಬಾಹುಗಳು ದೇಹಕ್ಕಂಟಿಕೊಂಡಿರುವುದರಿಂದ, ಅವನ ಬಾಹುಗಳ ಕಾರ್ಯ ಬಾಹುಳ್ಯಕ್ಕೆ ಒಂದು ಮಿತಿ ಇದೆ. ಆ ಬಾಹುಗಳು ದೇಹದಿಂದ ಬೇರ್ಪಟ್ಟು ಹಾರಲು ಸಾಧ್ಯವಿಲ್ಲ ಎಂದು ಹೇಳುತ್ತಾ, ಪ್ರತೀ ಮಾನವನ ಕಾರ್ಯಕ್ಷಮತೆ ಅಥವಾ ಸಾಮರ್ಥ್ಯಕ್ಕೆ ಒಂದು ಮಿತಿ ಇರುತ್ತದೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

A man is as independent of this world as his hands are independent of him. They have a perimeter beyond which they can not reach. With in the limits, they can turn, fold, extend or spring up. But, they cannot leave the body and fly. - Mankutimma

ವಿಷಯಗಳು

LifeDeathDetachment

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.