ಪಟ್ಟಿಗೆ ಹಿಂತಿರುಗಿ

ಕಗ್ಗ 545 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಬುದ್ಧಿಪ್ರಕಾಶದಿಂದಂತರನುಭವಶೋಧೆ । ಸಿದ್ಧವಾ ಶೋಧೆಯಿಂ ಸತ್ಯಸಂವೀಕ್ಷೆ ॥ ಶುದ್ಧಸತ್ಯವ ಜೀವಿತಪ್ರಶ್ನೆಗನ್ವಯಿಪ । ಪದ್ಧತಿಯೆ ಧರ್ಮವೆಲೊ - ಮಂಕುತಿಮ್ಮ ॥ ೫೪೫ ॥

buddhi prakAshadinda antar anubhava shOdhe । siddhavA shOdheyim satya samvIkShe ॥ shuddha satyava jIvitaprashnege anvayipa । paddhatiye dharmavelo - Mankutimma ॥ 545 ॥

ಕನ್ನಡದಲ್ಲಿ ಅರ್ಥ

ನಮ್ಮ ಅಂತರಂಗದ ಅನುಭವವು ಬುದ್ಧಿಯಿಂದ ಜಿಜ್ಞಾಸೆಗೆ ಒಳಪಟ್ಟಾಗ ಅದು ಬೆಳಗಿ ಆ ಬೆಳಕಿನಲ್ಲಿ ಅರಿವು ಅರಳಿ, ಮತ್ತಷ್ಟು ಶೋಧನೆ ನಡೆದಾಗ ಸತ್ಯವು ಗೋಚರವಾಗುತ್ತದೆ. ಆ ಶುದ್ಧ ಸತ್ಯವನ್ನು ನಮ್ಮ ಬದುಕಿನ ಹಲವಾರು ಪ್ರಶ್ನೆಗಳಿಗೆ ಅನ್ವಯಿಸುವ ಪದ್ದತಿಯೇ ಧರ್ಮ ಎಂದು ನಮ್ಮ ಅಂತರಂಗದಲ್ಲಿ ನಡೆಯ ಬೇಕಾದ ಜಿಜ್ಞಾಸೆಗೆ ಒಂದು ಮಾರ್ಗವನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

One must search inwards for experiences using the light of one's intellect. From that, you will find the universal truth. Applying that universal truth to every day dilemmas and resolving them is called 'Dharma' - nothing more complex. - Mankutimma

ವಿಷಯಗಳು

WisdomLifeMoralityWar

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.