ಪಟ್ಟಿಗೆ ಹಿಂತಿರುಗಿ

ಕಗ್ಗ 541 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಪ್ರಾಕ್ತನದ ವಾಸನೆ ಮನಕೆ ಮೊದಲಿನ ಮಂತ್ರಿ । ಯುಕ್ತಿಗಳ ತನಗೊಪ್ಪುವಂತೆ ತಿರುಗಿಪುದು ॥ ಸೂಕ್ತವೆನಿಪುದು ಸಹಜರುಚಿ ತನ್ನ ತರ್ಕವನೆ । ಗುಪ್ತದೊಳು ಕುಟಿಲವಿದು - ಮಂಕುತಿಮ್ಮ ॥ ೫೪೧ ॥

prAktanada vAsaneye manake modalina mantri । yuktigaLa tanagoppuvante tirugipudu ॥ sUktavenipudu sahaja ruchi tanna tarkavane । guptadoLu kuTilavidu - Mankutimma ॥ 541 ॥

ಕನ್ನಡದಲ್ಲಿ ಅರ್ಥ

ನಮ್ಮ ಪೂರ್ವ ಜನ್ಮದ ವಾಸನೆಗಳೇ, ನಮ್ಮ ಮನಸ್ಸು ಬುದ್ಧಿಗಳಿಗೆ, ತನಗೆ ಅನುಗುಣವಾಗಿ ಸಲಹೆಗಳನ್ನು ನೀಡುವ ಮಂತ್ರಿಯಿದ್ದ ಹಾಗೆ. ಈ ವಾಸನೆಗಳೇ ತನ್ನ ಸಹಜವಾದಂತಹ ಅಭಿರುಚಿಗೆ ಸರಿಯಾದ ತರ್ಕವನ್ನು ಮಂಡಿಸಿ ತನಗೆ ಹೇಗೆ ಬೇಕೋ ಹಾಗೆ ನಮ್ಮನ್ನು ತಿರುಗಿಸಿಕೊಳ್ಳುತ್ತದೆ. ಇದು ನಮ್ಮನ್ನು ಅವುಗಳಿಂದ ಮುಕ್ತರಾಗಿ ಪರತತ್ವದೆಡೆಗೆ ಹೋಗದಂತೆ ತಡೆಯುವ ಕುಟಿಲತೆ ಎಂದು ನಮ್ಮ ಪೂರ್ವ ವಾಸನೆಗಳಿಗೂಮತ್ತು ಇಂದಿನ ನಮ್ಮ ಬದುಕಿಗೂ ಇರುವ ಸಂಬಂಧವನ್ನು ವಿಶ್ಲೇಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

Our old memories are our first adviser. They influence our intellect to suit itself (justify itself). It will always favor your argument only and may seem to help you. But in the end, it is serving its purpose only and hence deceitful - Mankutimma

ವಿಷಯಗಳು

DeathSocietySelf

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.