ಮಂಕುತಿಮ್ಮನ ಕಗ್ಗ by D.V. Gundappa
ಸುತೆಯ ಪೋಷಿಸಿ ಬೆಳಸಿ, ಧನಕನಕದೊಡನವಳನ್- । ಇತರಗೃಹಕಿತ್ತು ನೀಂ ಕೇಳ್ವ ಮುಯ್ಯೇನು? ॥ ಪ್ರತಿಫಲವು ಬೇರೇಕೆ? ಸುಕೃತಕದು ತಾನೆ ಫಲ । ಹಿತ ಮನದ ಪಾಕಕದು - ಮಂಕುತಿಮ್ಮ ॥ ೪೯೭ ॥
suteya pOShisi beLasi, dhana kanakadoDane avaLan । itara gRuhakittu nIm kELva myyEnu? ॥ pratiphalavu bErEke? sukRutake adu tAne phala । hita manada pAkakadu - Mankutimma ॥ 497 ॥
ತನ್ನ ಮಗಳನ್ನು ಪೋಷಿಸಿ, ಬೆಳೆಸಿ, ದೊಡ್ದವಳನ್ನಾಗಿಸಿ, ಸೂಕ್ತ ವಯಸ್ಸಿನಲ್ಲಿ ಧನ ಕನಕಗಳ ಸಹಿತ ವಿಜೃಂಭಣೆಯಿಂದ ವಿವಾಹ ಮಾಡಿ ಅನ್ಯರ ಮನೆಗೆ ಕಳುಹಿಸಿಕೊಡುವಾಗ, ತಂದೆ ಪ್ರತಿಫಲವಾಗಿ ಅಪೇಕ್ಷೆ ಪಡುವುದೇನು? ಮಾಡಿದ ಕೆಲಸ ಸರಾಗವಾಗಿ ನಡೆದರೆ ಅದೇ ಒಳ್ಳೆಯ ಫಲವಲ್ಲವೇ? ಹಾಗೆಯೇ (ಪರಮಾತ್ಮನ ಪೂಜೆಯಿಂದ) ಮನಸ್ಸು ಹಿತವಾಗಿ ಪಕ್ವವಾದರೆ ಸಾಕಲ್ಲವೇ ಬೇರೇನು ಬೇಕು? ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
You bring up a daughter with lot of love and care. Then you give her away to a in-laws with a lot of money and gold. What do you expect in return? Nothing. What can you expect in return? Virtue its own reward. It is good for maturity of the mind. - Mankutimma
ವೀಡಿಯೊ ಶೀಘ್ರದಲ್ಲಿ ಬರುತ್ತಿದೆ
ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.