ಪಟ್ಟಿಗೆ ಹಿಂತಿರುಗಿ

ಕಗ್ಗ 489 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಕಣ್ಣಿರದೆ ರವಿಯೇನು? ರವಿಯಿರದೆ ಕಣ್ಣೇನು? । ಅನ್ಯೋನ್ಯ ಸಹಕೃತಿಯಿನುಭಯ ಸಾರ್ಥಕತೆ ॥ ನಿನ್ನಾತ್ಮ ಜಗದಾತ್ಮಕಂತು ಸಂಬಂಧವವು । ವಹ್ನಿಸ್ಫುಲಿಂಗಗಳೊ - ಮಂಕುತಿಮ್ಮ ॥ ೪೮೯ ॥

kaNNirade raviyEnu? raviyirade kaNNEnu? । anyOnya sahakRutiyin ubhaya sArthakate ॥ ninnAtma jagada Atmake antu sambandhavu avu । vahni sphulingagaLo - Mankutimma ॥ 489 ॥

ಕನ್ನಡದಲ್ಲಿ ಅರ್ಥ

ಸೃಷ್ಟಿಯ ಪರಸ್ಪರ ನಿರ್ಭರತೆಯನ್ನು ಮುಂದುವರೆಸುತ್ತಾ, ನೋಡುವ ಶಕ್ತಿಯಿಲ್ಲದೆ ಬೆಳಕಿದ್ದರೇನು ಬಿಟ್ಟರೇನು? ಬೆಳಕಿಲ್ಲದಿದ್ದರೆ ಕಣ್ಣಿದ್ದರೆಷ್ಟು ಬಿಟ್ಟರೆಷ್ಟು, ಇವೆರಡರ ಅನ್ಯೋನ್ಯತೆ ಮತ್ತು ಸಹಕಾರವೇ, ಆತ್ಮ ಮತ್ತು ಪರಮಾತ್ಮ ಸಂಬಂಧದ ಸ್ವರೂಪ, ಬೆಂಕಿಯಿದ್ದಾಗ ಕಿಡಿಯಿರುವಂತೆ ಎಂದು ಪ್ರತಿವಸ್ತುವಿಗೂ ಇರುವ ಕಾರಣ,ಕಾರ್ಯ,ಕರ್ಮ ಮತ್ತು ಫಲದ ಸ್ವರೂಪವನ್ನು ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

What good is the sun with out eyes to see? What good are the eyes without the sun? When one helps the other, there will be satisfying relation. Similar is the relation between your soul and the universe. They are like fire and splinters. - Mankutimma

ವಿಷಯಗಳು

MoralityNatureSociety

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.