ಪಟ್ಟಿಗೆ ಹಿಂತಿರುಗಿ

ಕಗ್ಗ 486 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ತನಗಿಂತ ಹಿರಿದ, ಭುವನಕ್ಕಿಂತ ಹಿರಿದೊಂದ- । ನನುಭವದ ಹಿಂದೆ, ಸೃಷ್ಟಿಯ ನೆರಳ ಹಿಂದೆ ॥ ಆನುಮಿತಿಸಿ ಮನುಜನಾ ಹಿರಿದನೆಳಸುವನೆಯ್ದೆ । ಮನುಜನೊಳಹಿರಿಮೆಯದು - ಮಂಕುತಿಮ್ಮ ॥ ೪೮೬ ॥

tanaginta hirida, bhuvanakkinta hiridondanu । anubhavada hinde, sRuShTiya neraLa hinde ॥ Anumitisi manujan A hiridanu eLesuvanu eyde । manujana oLa hirimeyadu - Mankutimma ॥ 486 ॥

ಕನ್ನಡದಲ್ಲಿ ಅರ್ಥ

ತನಗಿಂತ ಹಿರಿದಾದದ್ದು ಈ ಭೂಮಿಗಿಂತ ಹಿರಿದಾದದ್ದು ಮತ್ತು ಇವೆಲ್ಲದರ ಅನುಭವಕ್ಕಿಂತ ಒಂದು ಹಿರಿದಾದ ಅನುಭವ ಈ ಸೃಷ್ಟಿಯ ಹಿಂದೆ ಇದೆ ಮತ್ತು ಈ ಜಗತ್ತು ಅಂತಹ ಹಿರಿದಾದ ಒಂದು ಶಕ್ತಿಯ ನೆರಳು ಮಾತ್ರ ಎಂದು ಅರಿತ ಮಾನವನು ಆ ಪರಮಾತ್ಮನ ಸೃಷ್ಟಿಯಲ್ಲಿ ಭಿನ್ನವಾಗಿ ತನ್ನ ಹಿರಿಮೆಯನ್ನು ಮೆರೆದಿದ್ದಾನೆ ಎಂದು ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಅರ್ಥ ಮತ್ತು ವ್ಯಾಖ್ಯಾನ

Man has been thinking that there is something much bigger, larger, greater than him, then the world he knows, than anything he has experienced, behind the secret of creation. He is able to hypothesize and make that thing larger and larger - the concept of God. This thinking is the result of inner greatness in a man. - Mankutimma

ವಿಷಯಗಳು

DevotionLifeNature

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.