ಪಟ್ಟಿಗೆ ಹಿಂತಿರುಗಿ

ಕಗ್ಗ 468 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಲಾವಣ್ಯವಾತ್ಮಗುಣವದರಿಂದೆ ಲೋಕಜನ । ದೇವನನು ಕಮನೀಯ ವಿಗ್ರಹಂಗಳಲಿ ॥ ಭಾವಿಸುತ ತಮ್ಮಿಷ್ಟಭೋಗಗಳನರ್ಪಿಸುವ । ಸೇವೆಯಿಂ ನಲಿಯುವರು - ಮಂಕುತಿಮ್ಮ ॥ ೪೬೮ ॥

lAvaNya AtmaguNavu adarinda lOkajana । dEvananu kamanIya vigrahangaLali ॥ bhAvisuta tamma iShTa bhogagaLanu arpisuva । sEveyiM naliyuvaru - Mankutimma ॥ 468 ॥

ಕನ್ನಡದಲ್ಲಿ ಅರ್ಥ

ಆತ್ಮದ ಗುಣ ಬಹಳ ಸುಂದರ. ಇಂತಹ ಸುಂದರ ಭಾವದಿಂದ ಸುಂದರ ವಿಗ್ರಹಗಳಲ್ಲಿ ಆ ಪರಮಾತ್ಮನನ್ನು ಭಾವಿಸುತ್ತಾ, ಆ ಪರಮಾತ್ಮನಿಗೆ ತಮಗಿಷ್ಟವಾದ ಪದಾರ್ಥಗಳನ್ನು ನೈವೇದ್ಯವಾಗಿ ಅರ್ಪಿಸುವ ಸೇವೆಯನ್ನು ಮಾಡುತ್ತಾ, ಲೋಕದ ಜನರು ನಲಿಯುತ್ತಾರೆ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

Beauty is the natural quality of the soul. It is perhaps why people of the world imagine Gods to be in beautiful form (idols). They become happy by offering all the worldly items that they like to Gods. - Mankutimma

ವಿಷಯಗಳು

DevotionLifeSociety

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.