ಪಟ್ಟಿಗೆ ಹಿಂತಿರುಗಿ

ಕಗ್ಗ 464 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಸ್ರವಿಸುವುದು ಜೀವರಸ ಹೃದಯಗರ್ತದ ತಳದಿ । ಕಿವಿಗಾ ರಹಸ್ಯದಲಿ ಕಾವ್ಯಗಾನಗಳಿಂ ॥ ಭುವನದಾಚಿನ ರಹಸ್ಯದ ಕೀರ್ತಿ ವೇದಗಳ । ರವದಿನೆಂದಾರ್ಷಮತ - ಮಂಕುತಿಮ್ಮ ॥ ೪೬೪ ॥

sravisuvudu jIvarasa hRudayagartada taLadi । kivigA rahasyadali kAvyagAnagaLim ॥ bhuvanadAchina rahasyada kIrti vEdagaLa । ravadinendArShamata - Mankutimma ॥ 464 ॥

ಕನ್ನಡದಲ್ಲಿ ಅರ್ಥ

ಕಾವ್ಯವೋ, ಕವನವೋ,ಗಾಯನವೋ ಅಥವಾ ಯಾವುದಾದರೂ ಒಂದು ವಾದ್ಯದ ಸಂಗೀತವೋ ನಾವು ಏಕಾಂತದಲ್ಲಿದ್ದಾಗ ನಮ್ಮ ಕಿವಿಗಳಿಗೆ ಬಿದ್ದರೆ ನಮ್ಮ ಹೃದಯಗಳಿಂದ ಜೀವರಸ ಒಸರುತ್ತದೆ. ಇದು ಈ ಜಗತ್ತಿನ ವಿಷಯವಾದರೆ, ಈ ಭೂಮಿಯಿಂದಾಚಿನ ಜ್ಞಾನವು, ರಹಸ್ಯವಾಗಿ ವೇದಗಳಾಗಿ ಶಬ್ದರೂಪದಿ ನಮಗೆ ಇಳಿದುಬಂದಿದೆ ಎನ್ನುವುದು ಋಷಿಗಳ ಅಭಿಮತ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

The essence of life flows as emotions in the bottom of every heart. Poets listen (and hear) this secret that comes out as poems and songs. Similarly, it is the sages opinion that the truth beyond this world comes to as the Vedas - Mankutimma

ವಿಷಯಗಳು

WisdomLifeLove

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.