ಪಟ್ಟಿಗೆ ಹಿಂತಿರುಗಿ

ಕಗ್ಗ 454 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಪರಿಪರಿಯ ವಿಶ್ವಪ್ರಕೃತಿಶಕ್ತಿತೇಜಗಳು । ಕೆರಳಿಸಲು ನರಹೃದಯರಭಸಗಳನದರಿಂ ॥ ಪೊರಮಡುವ ಸಂಮೋಹಧೀರಗಂಭೀರಗಳ । ಸರಸತೆಯೆ ಸುಂದರವೊ - ಮಂಕುತಿಮ್ಮ ॥ ೪೫೪ ॥

paripariya vishva prakRuti shakti tEjagaLu । keraLisalu nara hRudaya rabhasagaLanu adarim ॥ poramaDuva sammOha dhIra gambhIragaLa । sarasateye sundaravo - Mankutimma ॥ 454 ॥

ಕನ್ನಡದಲ್ಲಿ ಅರ್ಥ

ಜಗತ್ತಿನಲ್ಲಿನ ಮೂಲ ಶಕ್ತಿ ಎಂದರೆ ಪರಮಾತ್ಮ ಶಕ್ತಿ, ಬೇರೆ ಬೇರೆ ವಿಧದಲ್ಲಿ ಪ್ರಕಟಗೊಂಡು ಮನುಷ್ಯನ ಹೃದಯದಲ್ಲಿ ಮೋಹಕ, ಧೀರ, ಗಂಭೀರಗಳಂತಹ ಚಿತ್ರವಿಚಿತ್ರ ಭಾವನೆಗಳನ್ನು ಕೆರಳಿಸಿ, ಆನಂದವನ್ನು ಪಡೆಯಲುದ್ಯುಕ್ತನಾದಾಗ ಈ ಶಕ್ತಿಗಳೊಡನೆ ಇವನು ನಡೆಸುವ ಸರಸವೇ ಒಂದು ಸುಂದರತೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

There are so many elements in this universe - natural forces, energies. They sensitize a man's heart and create a stir. From that arises illusions, courage and seriousness. The interplay of these emotions is beautiful. - Mankutimma

ವಿಷಯಗಳು

NatureLove

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.