ಪಟ್ಟಿಗೆ ಹಿಂತಿರುಗಿ

ಕಗ್ಗ 432 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಪ್ರತ್ಯೇಕಸುಖವಲ್ಪದುದು, ಗಳಿಗೆತೋರ್ಕೆಯದು । ಆತ್ಮವಿಸ್ತಾರವಾಗಿಪುದೆ ನಿತ್ಯಸುಖ ॥ ವ್ಯಕ್ತಿಜೀವನದ ಸೊಂಪು ಸಮಷ್ಟಿಜೀವನದಿ । ಒಟ್ಟುಬಾಳ್ವುದ ಕಲಿಯೊ - ಮಂಕುತಿಮ್ಮ ॥ ೪೩೨ ॥

pratyEkasukhavalpadudu, gaLige tOrkeyadu । AtmavistAravu Agipude nityasukha ॥ vyaktijIvanada sompu samaShTijIvanadi । oTTubALvuda kaliyo - Mankutimma ॥ 432 ॥

ಕನ್ನಡದಲ್ಲಿ ಅರ್ಥ

ನಾವು ಪ್ರತಿಯೊಬ್ಬರೂ ನಮ್ಮಷ್ಟಕ್ಕೆ ನಾವೇ ಅನುಭವಿಸಿ ಆನಂದ ಪಡುವ ಸುಖ, ಅಲ್ಪ ಸುಖ ಮತ್ತು ಕ್ಷಣಿಕವಾದದ್ದು. ಹಾಗಲ್ಲದೆ ಆತ್ಮದ ಭಾವವನ್ನು ವಿಶಾಲವಾಗಿಸಿವುದೇ ಶಾಶ್ವತ ಸುಖ. ಒಬ್ಬ ವ್ಯಕ್ತಿ ತನ್ನಷ್ಟಕ್ಕೆ ತಾನೇ ಸುಖಪಡುವುದಕ್ಕಿಂತ ತನ್ನೊಡನೆ ಸಮಸ್ತರನ್ನೂ ಸೇರಿಸಿಕೊಂಡು ಸುಖಪಡುವುದು ಹಿತವಾಗಿರುತ್ತದೆ, ಹಾಗಾಗಿ ಒಟ್ಟು ಬಾಳುವೆಯನ್ನು ಕಲಿತುಕೋ ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

Material pleasures enjoyed in isolation is weak. The gains made thus is only for a show. The real happiness is only when you expand your 'self' to include the world. That happiness is for ever. Individual happiness is best when it is enjoyed with the whole. Learn to live together. - Mankutimma

ವಿಷಯಗಳು

LifeSelf

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.