ಪಟ್ಟಿಗೆ ಹಿಂತಿರುಗಿ

ಕಗ್ಗ 416 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಕುಸುಮಕೋಮಲಗಾತ್ರ ಶೂರ್ಪಣಖಿಗರಿದಾಯ್ತೆ? । ವಿಷದ ಪೂತನಿ ನಯನಪಕ್ಷ್ಮದೊಳಗಿರಳೆ? ॥ ಮುಸಿನಗುವಿನೊಳಗಿರಲಶಕ್ಯವೆ ಪಿಶಾಚಿಕೆಗೆ । ಮೃಷೆಯೊ ಮೈಬೆಡಗೆಲ್ಲ - ಮಂಕುತಿಮ್ಮ ॥ ೪೧೬ ॥

kusuma kOmala gAtra shUrpaNakhige aridAyte? । vishada pUtani nayanapakShmadoLagiraLe? ॥ musinaguvinoLagiralashakyave pishAchikege । mRuSheyo maibeDagella - Mankutimma ॥ 416 ॥

ಕನ್ನಡದಲ್ಲಿ ಅರ್ಥ

ರಾಮಾಯಣದ ಶೂರ್ಪಣಖಿಗೆ ರಾಮನನ್ನು ಕೀಟಲೆ ಮಾಡಲು ಸುಂದರ ರೂಪವನ್ನು ಧರಿಸಲು ಕಷ್ಟವೇನೂ ಆಗಲಿಲ್ಲ. ಹಾಗೆಯೇ ಕೃಷ್ಣನನ್ನು ಕೊಲ್ಲಲು ಬಂದ ಪೂತನೆಯು ತನ್ನ ದೇಹವೆಲ್ಲಾ ವಿಷವಾದರೂ, ಮೋಹನ ರೂಪವನ್ನು ಧರಿಸಿ ಬರಲಿಲ್ಲವೇ? ಪಿಶಾಚಿಗೆ ಮುಗುಳುನಗೆ ಸೂಸುವುದು ಆಶಕ್ಯವಲ್ಲ. ಹಾಗಾಗಿ ಹೊರಗಿನ ರೂಪವೆಲ್ಲ ಕೇವಲ ಕಪಟ, ಭ್ರಮೆ ಎಂದು ಹೊರ ರೂಪ ಮತ್ತು ಅಂತರ್ಯದ ವ್ಯತ್ಯಾಸಗಳನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

Did Shoorpanakha not take the form of a delicate damsel? Did Putani whose body was full of poison not appear to be very pleasing (as harmless as the eye-lashes) to the eyes? Can a smile not hide devious intention? The whole bodily appearance is nothing but a lie. - Mankutimma

ವಿಷಯಗಳು

Morality

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.