ಪಟ್ಟಿಗೆ ಹಿಂತಿರುಗಿ

ಕಗ್ಗ 410 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಜಾನಪದಗಳು ರಾಜ್ಯಸಾಮ್ರಾಜ್ಯಗಳು ಗುರು । ಸ್ಥಾನಗಳು ಧರ್ಮಗಳು ಭಾಷೆ ವಿದ್ಯೆಗಳು ॥ ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ । ಮಾನವತೆ ನಿಂತಿಹುದು - ಮಂಕುತಿಮ್ಮ ॥ ೪೧೦ ॥

janapadagaLu rAjyasAmrAjyagaLu guru । sthAnagaLu dharmagaLu bhAShe vidyegaLu ॥ kANisade sAgihavu kAlapravAhadali । mAnavate nintihudu - Mankutimma ॥ 410 ॥

ಕನ್ನಡದಲ್ಲಿ ಅರ್ಥ

ಎಷ್ಟೋ ಗುಂಪುಗಳು ಜಾನಪದಗಳು, ರಾಜ್ಯಗಳು, ಸಾಮ್ರಾಜ್ಯಗಳು, ಗುರುಗಳು, ಗುರುಪೀಠಗಳು, ಧರ್ಮಗಳು, ಭಾಷೆಗಳು, ವಿದ್ಯೆಗಳು, ಹುಟ್ಟಿ ಕೆಲಕಾಲ ಇದ್ದು ಬದಲಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಕಾಲ ಪ್ರವಾಹದಲ್ಲಿ ಕಾಣೆಯಾಗಿವೆ. ಆದರೆ ಅದನ್ನೆಲ್ಲ ಕಂಡ ಕಂಡುಕೊಂಡ,ಅನುಭವಿಸಿದ ಮಾನವತೆ ಮಾತ್ರ ಈ ಜಗತ್ತಿನಲ್ಲಿ ನಿಂತಿದೆ ಎನ್ನುವುದೇ ಈ ಮುಕ್ತಕದ ಹೂರಣ.

ಅರ್ಥ ಮತ್ತು ವ್ಯಾಖ್ಯಾನ

Provinces, states, empires, pontiffs, positions, religions, languages, skills and teachings have all come and gone in this flood of time. Only humanity stands constant. - Mankutimma

ವಿಷಯಗಳು

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.